ಸಿರಿಯಾದಿಂದ ಪ್ಯಾರಿಸ್‍ಗೆ ಉಗ್ರರ ಪಯಣ ಹೇಗಿತ್ತು?

ಪ್ಯಾರಿಸ್‍ನಲ್ಲಿ ನೆತ್ತರಕೋಡಿ ಹರಿಸಿದ ಉಗ್ರರಲ್ಲಿ ಕೆಲವರು ಸಿರಿಯಾದಿಂದ ಬಂದಿರುವುದು ಈಗ ಸ್ಪಷ್ಟವಾಗಿದೆ...
ಪ್ಯಾರಿಸ್ ನಲ್ಲಿ ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿ ಮತ್ತು ಪೊಲೀಸ್
ಪ್ಯಾರಿಸ್ ನಲ್ಲಿ ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿ ಮತ್ತು ಪೊಲೀಸ್
Updated on: 
ಪ್ಯಾರಿಸ್‍ನಲ್ಲಿ ನೆತ್ತರಕೋಡಿ ಹರಿಸಿದ ಉಗ್ರರಲ್ಲಿ ಕೆಲವರು ಸಿರಿಯಾದಿಂದ ಬಂದಿರುವುದು ಈಗ ಸ್ಪಷ್ಟವಾಗಿದೆ. ಅವರು ಹೀಗೆ ಫ್ರಾನ್ಸ್ ತಲುಪುವ ಮೊದಲು ವಲಸಿಗರ ಸೋಗಿನಲ್ಲಿ ಯುರೋಪ್‍ನ ಐದು ರಾಷ್ಟ್ರಗಳನ್ನು ದಾಟಿ ಫ್ರಾನ್ಸ್ ತಲುಪಿದ್ದಾರೆ. ಈ ಸತ್ಯ ಮೃತ ದಾಳಿಕೋರನ ಪಕ್ಕ ಪತ್ತೆಯಾದ ಪಾಸ್‍ಪೋರ್ಟ್‍ನಿಂದ ಬಹಿರಂಗವಾಗಿದೆ.
1. ಸಿರಿಯಾ: ಪ್ಯಾರಿಸ್ ದಾಳಿಕೋರನ ಮೃತದೇಹದ ಪಕ್ಕ ಸಿಕ್ಕಿದ್ದು ಐಎಸ್ ಪ್ರಾಬಲ್ಯದ ಸಿರಿಯಾದ ಪಾಸ್‍ಪೋರ್ಟ್ 
2 ಗ್ರೀಸ್: ಅ.3ರಂದು ಇದೇ ಪಾಸ್‍ಪೋರ್ಟ್ ಹೊಂದಿದಾತ ನಿರಾಶ್ರಿತರ ದಾರಿಯ ಮೂಲಕ ಲೆರೋಸ್ ದ್ವೀಪ ದಾಟಿದ್ದ 
3 ಸರ್ಬಿಯಾ: ಅಕ್ಟೋಬರ್ 7ರಂದು ಈ ಉಗ್ರ ಆಶ್ರಯಕ್ಕಾಗಿ ಇತರೆ ವಲಸಿಗರೊಂದಿಗೆ ಅರ್ಜಿ ಸಲ್ಲಿಸಿದ್ದ.
4 ಕ್ರೋಶಿಯಾ: ಅಕ್ಟೋಬರ್ ಅಂತ್ಯದಲ್ಲಿ ಕ್ರೋಶಿಯಾದಲ್ಲಿ ಈ ಪಾಸ್‍ಪೋರ್ಟ್ ಅನ್ನು ತೋರಿಸಲಾಗಿತ್ತು 
5 ಆಸ್ಟ್ರಿಯಾ: ನಂತರ ಈ ಪಾಸ್ ಪೋರ್ಟ್ ಹೊಂದಿದಾತ ಆಸ್ಟ್ರಿಯಾದಿಂದ ಪ್ರಯಾಣ ಬೆಳೆಸಿ ಫ್ರಾನ್ಸ್ ತಲುಪಿದ್ದ
6 ಫ್ರಾನ್ಸ್: ಸ್ಟೇಡ್ ಡೆ ಫ್ರಾನ್ಸ್ ಸ್ಟೇಡಿಯಂ ಪಕ್ಕ ಆತ್ಮಾಹುತಿ ಮಾಡಿಕೊಂಡಾತನ ಪಕ್ಕದಲ್ಲೇ ಈ ಪಾಸ್‍ಪೋರ್ಟ್ ಪತ್ತೆಯಾಯ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com