ಫ್ರಾನ್ಸ್ ಗೆ ರಷ್ಯಾ ಸಾಥ್; ತೀವ್ರಗೊಂಡ ವಾಯುದಾಳಿ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ ಉಗ್ರರ ನೆಲೆಗಳ ಮೇಲೆ ಅಮೆರಿಕ ಮತ್ತು ಫ್ರಾನ್ಸ್ ನಡೆಸುತ್ತಿರುವ ದಾಳಿಗೆ ಈಗ ರಷ್ಯಾವೂ ಕೈಜೋಡಿಸಿದೆ. ರಾಕಾ ನಗರದ ಮೇಲೆ ಸೋಮವಾರ ರಷ್ಯಾ ಕೂಡ ವೈಮಾನಿಕ ದಾಳಿ ನಡೆಸಿದೆ...
ಸಿರಿಯಾ ಮೇಲೆ ಫ್ರಾನ್ಸ್, ರಷ್ಯಾ ವಾಯುದಾಳಿ (ಸಂಗ್ರಹ ಚಿತ್ರ)
ಸಿರಿಯಾ ಮೇಲೆ ಫ್ರಾನ್ಸ್, ರಷ್ಯಾ ವಾಯುದಾಳಿ (ಸಂಗ್ರಹ ಚಿತ್ರ)
Updated on: 

ಪ್ಯಾರಿಸ್: ಸಿರಿಯಾದ ಇಸ್ಲಾಮಿಕ್ ಸ್ಟೇಟ್ ಉಗ್ರರ ನೆಲೆಗಳ ಮೇಲೆ ಅಮೆರಿಕ ಮತ್ತು ಫ್ರಾನ್ಸ್ ನಡೆಸುತ್ತಿರುವ ದಾಳಿಗೆ ಈಗ ರಷ್ಯಾವೂ ಕೈಜೋಡಿಸಿದೆ. ರಾಕಾ ನಗರದ ಮೇಲೆ ಸೋಮವಾರ  ರಷ್ಯಾ ಕೂಡ ವೈಮಾನಿಕ ದಾಳಿ ನಡೆಸಿದೆ.

ಜತೆಗೆ, ಸಮುದ್ರದಿಂದ ಉಡಾಯಿಸಲಾದ ಕ್ಷಿಪಣಿಗಳು ಮತ್ತು ದೀರ್ಘ ವ್ಯಾಪ್ತಿಯ ಬಾಂಬ್‍ಗಳನ್ನೂ ದಾಳಿಯಲ್ಲಿ ಬಳಸಲಾಗಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.  ಸೋಮವಾರದ ವೈಮಾನಿಕ ದಾಳಿಗೆ ಐಎಸ್ ನ ಕಮಾಂಡ್ ಸೆಂಟರ್ ಮತ್ತು ತರಬೇತಿ ಕೇಂದ್ರವು ಧ್ವಂಸವಾಗಿದೆ ಎಂದು ಫ್ರಾನ್ಸ್ ರಕ್ಷಣಾ ಪಡೆ ತಿಳಿಸಿದೆ. ಸೆಪ್ಟೆಂಬರ್‍ನಲ್ಲೇ ಫ್ರಾನ್ಸ್ ಸಿರಿಯಾ  ಮೇಲೆ ದಾಳಿ ಆರಂಭಿಸಿತ್ತು. ಆದರೆ, ಶುಕ್ರವಾರದ ಪ್ಯಾರಿಸ್ ದಾಳಿಯ ಬಳಿಕ ಇದನ್ನು ಇನ್ನಷ್ಟು ಹೆಚ್ಚಿಸಿದ್ದು, ಭಾನುವಾರ ಒಂದೇ ರಾತ್ರಿ 10 ವಿಮಾನಗಳ ಮೂಲಕ 20 ಬಾಂಬ್‍ಗಳನ್ನು ರಾಕಾ ನಗರದಲ್ಲಿ ಸ್ಫೋಟಿಸಿತ್ತು.

ಐಎಸ್-ಹ್ಯಾಕರ್ ಸೈಬರ್ ಯುದ್ಧ

ಐಎಸ್ ಉಗ್ರರು ಮತ್ತು ಅನಾನಿಮಸ್ ಹ್ಯಾಕರ್‍ಗಳ ನಡುವೆ ಸೈಬರ್ ಯುದ್ಧ ಆರಂಭವಾಗಿದೆ. ಪ್ಯಾರಿಸ್ ದಾಳಿ ಬಳಿಕ ಅನಾನಿಮಸ್ ಎಂಬ ಹ್ಯಾಕರ್‍ಗಳ ಗುಂಪು, ಬೃಹತ್ ಸೈಬರ್‍ದಾಳಿಗೆ ಸಿದ್ಧರಾಗಿ  ಎಂದು ಐಎಸ್‍ಗೆ ಬೆದರಿಕೆ ಹಾಕಿದ ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಐಎಸ್ ಉಗ್ರರು, ಹ್ಯಾಕರ್‍ಗಳ ವಿರುದ್ಧ ಪ್ರತಿತಂತ್ರ ರೂಪಿಸಿದ್ದಾರೆ. ಅನಾನಿಮಸ್‍ನಿಂದ ಹ್ಯಾಕ್ ಆಗದಂತೆ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ತನ್ನ ಚಾನೆಲ್‍ನಲ್ಲಿ ಸೂಚನೆಗಳನ್ನು ಕಳುಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com