ಫ್ರಾನ್ಸ್ ಮೇಲೆ ರಾಸಾಯನಿಕ, ಜೈವಿಕ ದಾಳಿ ಭೀತಿ: ಫ್ರೆಂಚ್ ಪ್ರಧಾನಿ ಎಚ್ಚರಿಕೆ

ಪ್ಯಾರಿಸ್ ಮೇಲೆ ಉಗ್ರರ ಸತತ ದಾಳಿಗಳ ಬಳಿಕ ಇದೀಗ ಇಸ್ಲಾಮಿಕ್ ಸ್ಟೇಟ್ ಉಗ್ರರು ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳಿಂದ ದಾಳಿ ಮಾಡುವ ಸಾಧ್ಯತೆ ಇದೆ ಎಂದು...
ಮಾನುಯಲ್ ವಾಲ್ಸ್
ಮಾನುಯಲ್ ವಾಲ್ಸ್
ಪ್ಯಾರಿಸ್: ಪ್ಯಾರಿಸ್ ಮೇಲೆ ಉಗ್ರರ ಸತತ ದಾಳಿಗಳ ಬಳಿಕ ಇದೀಗ ಇಸ್ಲಾಮಿಕ್ ಸ್ಟೇಟ್ ಉಗ್ರರು ರಾಸಾಯನಿಕ ಹಾಗೂ ಜೈವಿಕ ಅಸ್ತ್ರಗಳಿಂದ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಫ್ರಾನ್ಸ್ ಪ್ರಧಾನಿ ಮಾನುಯಲ್ ವಾಲ್ಸ್ ತಿಳಿಸಿದ್ದಾರೆ. 
ಪ್ಯಾರಿಸ್ ದಾಳಿಯ ಕುರಿತಂತೆ ಫ್ರಾನ್ಸ್ ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ರಾಸಾಯನಿಕ ದಾಳಿಯ ಕುರಿತು ವಾಲ್ಸ್ ಎಚ್ಚರಿಕೆ ನೀಡಿದ್ದಾರೆ. ಫ್ರಾನ್ಸ್ ಮೇಲೆ ಉಗ್ರರಿಂದ ರಾಸಾಯನಿಕ ಹಾಗೂ ಜೈವಿಕ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಉಗ್ರರ ಬಳಿ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳು ಇರುವ ಸಾಧ್ಯತೆ ಇದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ನಡೆದ ಚರ್ಚೆ ವೇಳೆ ತುರ್ತು ಪರಿಸ್ಥಿತಿಯನ್ನು ವಿಸ್ತರಿಸುವ ಕುರಿತ ವಿವರಿಸಿದ ವಾಲ್ಸ್ ದಾಳಿಯ ಸಾಧ್ಯತೆಯನ್ನು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com