ಬೆನ್ನಿಗೆ ಚೂರಿ ಹಾಕಿದ ಟರ್ಕಿ: ವ್ಲಾದಿಮಿರ್ ಪುಟಿನ್
ಮಾಸ್ಕೋ: ಟರ್ಕಿ ದೇಶವು ರಷ್ಯಾಗೆ ಬೆನ್ನಗೆ ಚೂರಿ ಹಾಕಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಮಂಗಳವಾರ ಹೇಳಿದ್ದಾರೆ.
ರಷ್ಯಾ ಯುದ್ಧ ವಿಮಾನವು ಅಂತಾರಾಷ್ಟ್ರೀಯ ವಾಯುಗಡಿಯನ್ನು ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದ ಟರ್ಕಿ ಸೇನೆಯು ಇಂದು ರಷ್ಯಾ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ರಷ್ಯಾ ಯುದ್ಧ ವಿಮಾನದಲ್ಲಿದ್ದ ಓರ್ವ ಪೈಲಟ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ರಷ್ಯಾದ ಭದ್ರತಾ ಪಡೆಗೆ ಸೇರಿದ ಸುಖೊಯ್ ಎಸ್‌ಯು–24 ಜೆಟ್ ವಿಮಾನವನ್ನು ಸಿರಿಯಾದಲ್ಲಿ ಹೊಡೆದು ಉರುಳಿಸಲಾಗಿದೆ. ಟರ್ಕಿಯ ಇಂತಹ ನಿರ್ಧಾರಗಳು ರಷ್ಯಾ ಹಾಗೂ ಟರ್ಕಿಯ ಸಂಬಂಧದ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎಂದು ಟರ್ಕಿಗೆ ಎಚ್ಚರಿಸಿದ್ದಾರೆ.
ಯುದ್ಧ ವಿಮಾನದ ಮೇಲಿನ ದಾಳಿಯೊಂದು ಇಂದು ದುರಂತ ಘಟನೆಯಾಗಿದೆ. ವಿಮಾನವು ಟರ್ಕಿಯ ವೈಮಾನಿಕ ಗಡಿ ಪ್ರವೇಶಿಸಿರಲಿಲ್ಲ’ವಿಮಾನ ಪತನದ ಸನ್ನಿವೇಶವನ್ನು ಅವಲೋಕಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದರಂತೆಯೇ ಟರ್ಕಿಶ್ ದೇಶದ ಪ್ರಧಾನಮಂತ್ರಿ ಅಹ್ಮೆತ್ ದವುಟೊಗ್ಲು ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಗಡಿಯಲ್ಲಿ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಸೇನೆ ಕ್ರಮ ಕೈಗೊಳ್ಳಬೇಕಾದದ್ದು ಅವರ ಕರ್ತವ್ಯವಾಗಿದೆ. ಆ ಕರ್ತವ್ಯವನ್ನು ಅವರು ಪಾಲಿಸಿದ್ದಾರೆ. ರಷ್ಯಾದ ಸೇನೆ ಗಡಿಯಲ್ಲಿ ನಿಯಮ ಉಲ್ಲಂಘಿಸಿದ್ದರಿಂದ ವಿಮಾನವನ್ನು ಹೊಡೆದುರುಳಿಸಲಾಗಿದೆ. ಅಂತರಾಷ್ಟ್ರೀಯ, ರಾಷ್ಟ್ರೀಯ ಭೂ ಗಡಿ ಹಾಗೂ ವಾಯು ಗಡಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ರಾಷ್ಟ್ರೀಯ ಕರ್ತವವಾಗಿದೆ. ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ