ಭಾರತದ ಹಿರಿಯಣ್ಣನ ವರ್ತನೆಯನ್ನು ಒಪ್ಪುವುದಿಲ್ಲ: ನೇಪಾಳ

ಭಾರತದೊಂದಿಗೆ ಉತ್ತಮ ಸಂಬಂಧವನ್ನು ಮುಂದುವರೆಸಲು ಬಯಸುತ್ತೇವೆ ಆದರೆ, ಭಾರತದ ಹಿರಿಯಣ್ಣನ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ
ಭಾರತ ನೇಪಾಳ
ಭಾರತ ನೇಪಾಳ

ನವದೆಹಲಿ: ಭಾರತದೊಂದಿಗೆ ಉತ್ತಮ ಸಂಬಂಧವನ್ನು ಮುಂದುವರೆಸಲು ಬಯಸುತ್ತೇವೆ ಆದರೆ ಭಾರತದ ಹಿರಿಯಣ್ಣನ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನೇಪಾಳದ ಆಡಳಿತರೂಢ ಸಿಪಿಎನ್(ಯುಎಂಎಲ್) ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಸಿಪಿಎನ್ ಕಾರ್ಯದರ್ಶಿ ಪ್ರದೀಪ್ ಗಯಾವಲಿ, ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆ ಬಗ್ಗೆ ಮಾತನಾಡಿದ್ದು ಭಾರತ ಜಾಗತಿಕ ಮಟ್ಟದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದರೆ ಅದು ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕಾಗುತ್ತದೆ ಎಂದಿದ್ದಾರೆ.
ಸಮಾನತೆಯ ಆಧಾರದಲ್ಲಿ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸಲು ಉತ್ಸುಕರಾಗಿದ್ದೇವೆ, ಆದರೆ ನೇಪಾಳ ಹಿರಿಯಣ್ಣನ ವರ್ತನೆಯನ್ನು ಒಪ್ಪಿಕೊಳ್ಳುವುದಿಲ್ಲ ಚೀನಾಗೂ ಇದೇ ಅಂಶಗಳು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಬೇಕಾದರೆ ಭಾರತ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದಬೇಕು ಎಂದು ಪ್ರದೀಪ್ ಗಯಾವಲಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com