ಅಮೆರಿಕ ಕಾಲೇಜ್‌ನಲ್ಲಿ ಶೂಟೌಟ್, 9 ಸಾವು

ಅಮೆರಿಕದ ಒರೆಗಾನ್‌ನಲ್ಲಿರುವ ರೋಸ್‌ಬರ್ಗ್ ಕಾಲೇಜಿನಲ್ಲಿ ಗುರುವಾರ ನಡೆದ ಕ್ಯಾಂಪಸ್ ಶೂಟೌಟ್‌ನಲ್ಲಿ 9ಕ್ಕೂ ಹೆಚ್ಚು ಮಂದಿಯನ್ನು ಗುಂಡಿಕ್ಕಿ ಹತ್ಯೆ ...
ಶೂಟೌಟ್ ಬಳಿಕ ಆತಂಕಗೊಂಡ ವಿದ್ಯಾರ್ಥಿಗಳು...
ಶೂಟೌಟ್ ಬಳಿಕ ಆತಂಕಗೊಂಡ ವಿದ್ಯಾರ್ಥಿಗಳು...

ರೋಸ್‌ಬರ್ಗ್: ಅಮೆರಿಕದ ಒರೆಗಾನ್‌ನಲ್ಲಿರುವ ರೋಸ್‌ಬರ್ಗ್ ಕಾಲೇಜಿನಲ್ಲಿ ಗುರುವಾರ ನಡೆದ ಕ್ಯಾಂಪಸ್ ಶೂಟೌಟ್‌ನಲ್ಲಿ 9ಕ್ಕೂ ಹೆಚ್ಚು ಮಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಕಾಲೇಜ್‌ನಲ್ಲಿ ಶೂಟೌಟ್ ನಡೆಯುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಡು ಹಾರಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಉಂಪ್ಕಾವ್ ಕಮ್ಯುನಿಟಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಂತಕನನ್ನು 26 ವರ್ಷದ ಕ್ರಿಸ್ ಹರ್ಪರ್ ಮೆರ್ಸೆರ್ ಎಂದು ಗುರುತಿಸಲಾಗಿದ್ದು, ಯಾವ ಕಾರಣಕ್ಕೆ ಈ ಶೂಟೌಟ್ ನಡೆಸಿದ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com