ಸಿಕ್ಕಿಬಿದ್ದ ಸೌದಿ ರಾಜಕುಮಾರ

ಬೀರತ್ ಏರ್ ಪೋರ್ಟ್ ಅತ್ಯಂತ ದೊಡ್ಡ ಪ್ರಮಾಣದ್ದು ಎನ್ನಲಾಗುತ್ತಿರುವ ಭಾರಿ ಡ್ರಗ್ ಧಂದೆಯೊಂದನ್ನು ಭದ್ರತಾ ಪಡೆ ಹಿಡಿದುಹಾಕಿದ್ದು...
ಸೌದಿ ರಾಜ
ಸೌದಿ ರಾಜ

ಬೇರೂತ್: ಬೀರತ್ ಏರ್ ಪೋರ್ಟ್ ಅತ್ಯಂತ ದೊಡ್ಡ ಪ್ರಮಾಣದ್ದು ಎನ್ನಲಾಗುತ್ತಿರುವ ಭಾರಿ ಡ್ರಗ್ ಧಂದೆಯೊಂದನ್ನು ಭದ್ರತಾ ಪಡೆ ಹಿಡಿದುಹಾಕಿದ್ದು, ಇದಕ್ಕೆ ಸಂಬಂಧಿಸಿದಂತೆ, ಸೌದಿಯ ರಾಜಕುಮಾರ ಹಾಗೂ ಇತರ ನಾಲ್ವರನ್ನು ಬಂಧಿಸಲಾಗಿದೆ. 

2 ಟನ್ ಗಳಷ್ಟು ಕ್ಯಪ್ಟಾಗಾನ್ ಮಾತ್ರೆ ಹಾಗೂ ಕೊಕೇನ್ ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಸೌದಿಯ ರಾಜಕುಮಾರ ಅಬ್ಡೆಲ್ ಮೊಹ್ಸೆನ್ ಬಿನ್ ವಾಲಿದ್ ಬಿನ್ ಅಬ್ದುಲ್ ಅಜೀಜ್ ಮತ್ತು ನಾಲ್ವರು ಸಹಚರರು ಏರ್ ಪೋರ್ಟ್ ಸೆಕ್ಯುರಿಟಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. 
ಏರ್ ಪೋರ್ಟ್‍ನಲ್ಲಿ ಹಿಂದೆಂದೂ ಇಷ್ಟೊಂದು ಪ್ರಮಾಣದ ಕಳ್ಳಸಾಗಣೆ ಸಿಕ್ಕಿರಲಿಲ್ಲ ಎಂದು ಅಲ್ಲಿನ ಸಿಬ್ಬಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೌದಿಯ ರಾಜಕುಮಾರ ಹೀಗೆ ಅಪರಾಧದಲ್ಲಿ ಭಾಗಿಯಾಗಿರುವುದು ಇದೇ ಮೊದಲೇನಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com