
ಲಾಹೋರ್: ಭಾರತ 50 ವರ್ಷಗಳ ಹಿಂದೆ ಪಾಕಿಸ್ತಾನದ ಮೇಲೆ ಗೌಪ್ಯ ದಾಳಿ ನಡೆಸಿತ್ತು, ಆದರೆ ಪಾಕಿಸ್ತಾನಿ ಸೇನೆ ಭಾರತಕ್ಕೆ ತಕ್ಕ ಉತ್ತರ ನೀಡಿತ್ತು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ರಕ್ಷಣಾ ದಿನವನ್ನು ಆಚರಿಸುವ ವೇಳೆ ರಹೀಲ್ ಶರೀಫ್ ಈ ಹೇಳಿಕೆ ನೀಡಿದ್ದಾರೆ. ಝರಬ್-ಎ- ಅಜಬ್ ಕಾರ್ಯಾಚರಣೆ ಶೀಘ್ರವೇ ತನ್ನ ಗುರಿಯನ್ನು ಸಾಧಿಸಲಿದೆ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಇದೇ ವೇಳೆ ತಿಳಿಸಿದ್ದಾರೆ.
ಪಾಕಿಸ್ತಾನದ ಕಾರ್ಯಾಚರಣೆಯ ಪರಿಣಾಮ ಉಗ್ರರು ದುರ್ಬಲಗೊಂಡಿದ್ದಾರೆ, ಕಳೆದ 13 ವರ್ಷಗಳಿಂದ ಪಾಕಿಸ್ತಾನ ಉಗ್ರವಾದದ ವಿರುದ್ಧ ಹೋರಾಡುತ್ತಿದೆ ಎಂದು ಹೇಳಿದ್ದಾರೆ. ರಕ್ಷಣಾ ದಿನಾಚರಣೆಗೆ ತಾಲೀಮು ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ 1965 ಯುದ್ಧದಲ್ಲಿ ಹೋರಾಡಿದ ಯೋಧರ ಕುಟುಂಬ ಸದಸ್ಯರು ಭಾಗವಹಿಸಿದ್ದರು.
Advertisement