ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನಕ್ಕೆ ಪ್ರಯತ್ನ ಶುರು

ಭದ್ರತಾ ಮಂಡಳಿಯ ಸುಧಾರಣಾ ಕ್ರಮದ ಪ್ರಕ್ರಿಯೆಗಳು ಬರುವ ವಾರದ ಅಂತ್ಯದ ವೇಳೆಗೆ ಆರಂಭವಾಗಲಿವೆ...
ವಿಶ್ವಸಂಸ್ಥೆ (ಸಂಗ್ರಹ ಚಿತ್ರ)
ವಿಶ್ವಸಂಸ್ಥೆ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ಭದ್ರತಾ ಮಂಡಳಿಯ ಸುಧಾರಣಾ ಕ್ರಮದ ಪ್ರಕ್ರಿಯೆಗಳು ಬರುವ ವಾರದ ಅಂತ್ಯದ ವೇಳೆಗೆ ಆರಂಭವಾಗಲಿವೆ.

ಸಾಮಾನ್ಯ ಸಭೆಯ ಅಧ್ಯಕ್ಷ ಸ್ಯಾಮ್  ಕುಟೆಸಾ ಅವರು ಈ ಸಂಬಂಧ ಪ್ರಕ್ರಿಯೆ ಶುರು ಮಾಡಿದ್ದಾರೆ. ಭಾರತ, ಜಪಾನ್ ಸೇರಿದಂತೆ ಕೆಲ ದೇಶಗಳು ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ  ಪಡೆದುಕೊಳ್ಳುವ ಸಲುವಾಗಿ ಯತ್ನ ನಡೆಸುತ್ತಲೇ ಇದ್ದು, ಇದಕ್ಕೆ ಇದುವರೆಗೂ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಈ ಬಾರಿಯ ಸಭೆಯಲ್ಲಿ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸ್ಯಾಮ್  ಅವರು ಚಿಂತನೆ ನಡೆಸಿದ್ದಾರೆ. ಸದ್ಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನಕ್ಕಾಗಿ ಕ್ಯೂನಲ್ಲಿ ನಿಂತಿರುವ ದೇಶಗಳೆಂದರೆ ಭಾರತ, ಬ್ರೆಜಿಲ್, ಜಪಾನ್ ಮತ್ತು ಜರ್ಮನಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com