ಹೆಚ್ -1ಬಿ ವೀಸಾ ನೀಡಿಕೆಯಲ್ಲಿ ಕಾನೂನು ಉಲ್ಲಂಘನೆಯಾಗಿಲ್ಲ: ಇನ್ಫೋಸಿಸ್

ನೌಕರರಿಗೆ ಹೆಚ್ -1ಬಿ ವೀಸಾ ನೀಡಿದ್ದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತನಿಖೆಯ ನಂತರ ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಭಾರತದ ಎರಡನೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ನೌಕರರಿಗೆ ಹೆಚ್ -1ಬಿ ವೀಸಾ ನೀಡಿದ್ದರಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ತನಿಖೆಯ ನಂತರ ಅಮೆರಿಕ ಸರ್ಕಾರ ಸ್ಪಷ್ಟಪಡಿಸಿದೆ ಎಂದು ಭಾರತದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವೆ ಕಂಪೆನಿಯಾದ ಇನ್ಫೋಸಿಸ್ ಮಂಗಳವಾರ ತಿಳಿಸಿದೆ.

ದಕ್ಷಿಣ ಕ್ಯಾಲಿಫೋರ್ನಿಯಾ ಎಡಿಸನ್ ನಲ್ಲಿನ ಕಂಪೆನಿಯ ಪ್ರೊಜೆಕ್ಟ್ ನಲ್ಲಿ ಉದ್ಯೋಗಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಿಯಾಗಿ ಪಾಲಿಸಲಾಗಿದೆ ಎಂದು ಅಮೆರಿಕದ ಕಾನೂನು ಇಲಾಖೆ ತನಿಖೆ ನಂತರ ವರದಿ ನೀಡಿದೆ ಎಂದು ಇನ್ಫೋಸಿಸ್ ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ಜೂನ್ ನಿಂದ ಆರಂಭಿಸಲಾಗಿದ್ದ ತನಿಖೆಯಲ್ಲಿ 145 ಪುಟಗಳ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಯಾವುದರಲ್ಲಿಯೂ ಕಾನೂನು ಉಲ್ಲಂಘನೆ ಕಂಡುಬಂದಿಲ್ಲ ಎಂದು ಹೇಳಲಾಗಿದೆ.

ನೌಕರರನ್ನು ಅಮೆರಿಕದ ಕಂಪೆನಿಯಲ್ಲಿ ನೇಮಿಸಿಕೊಳ್ಳುವಾಗ ಕಾನೂನು ಉಲ್ಲಂಘಿಸಲಾಗಿದೆ ಎಂದು ಅಮೆರಿಕ ಸರ್ಕಾರದ ಕಾರ್ಮಿಕ ಇಲಾಖೆ ಇನ್ಫೋಸಿಸ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ವಿರುದ್ಧ ತನಿಖೆ ಆರಂಭಿಸಿತ್ತು. ಈ ಕುರಿತು ಟಿಸಿಎಸ್ ಪ್ರತಿಕ್ರಿಯೆ ನೀಡಬೇಕಾಗಿದೆ.

ಅಮೆರಿಕದ ಹೆಚ್ 1ಬಿ ವೀಸಾ ವಲಸೆ ರಹಿತ ವೀಸಾವಾಗಿದ್ದು, ಅಮೇರಿಕಾದ ಕಂಪನಿಗಳು ವಾಸ್ತುಶೈಲಿ, ಇಂಜಿನಿಯರಿಂಗ್, ಗಣಿತ, ವಿಜ್ಞಾನ, ಔಷಧಿ ಮೊದಲಾದ ಕ್ಷೇತ್ರಗಳಲ್ಲಿ  ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಕೌಶಲದ ವೃತ್ತಿಗಳಲ್ಲಿ ವಿದೇಶಿ ನೌಕರರನ್ನು ನೇಮಿಸಿಕೊಳ್ಳುವುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com