ಆಸ್ಟ್ರೇಲಿಯಾದಲ್ಲಿ ನಿರಾಶ್ರಿತರ ಪರ ಉರಿದ ಮೇಣದ ಬತ್ತಿಗಳು

ಈಗ ಎಲ್ಲೆಡೆ ನಿರಾಶ್ರಿತರ ಪರವಾಗಿ ದನಿ ಕೇಳಿಬರುತ್ತಿದೆ. ಅಯ್ಲಾನ್ ಕುರ್ದಿ ಸಾವಿನ ಹಿನ್ನೆಲೆಯಲ್ಲಿ ಮತ್ತು ವಲಸಿಗರು ಯುರೋಪಿಯನ್ ದೇಶಗಳತ್ತ ಆಶ್ರಯ ಅರಸಿ ಬರುತ್ತಿರುವವರು..
ಅಡಿಲೇಡ್ ನಲ್ಲಿ ನಡೆದ ಸಾಮೂಹಿಕ ಮೇಣದಬತ್ತಿಯ ಶ್ರದ್ಧಾಂಜಲಿ (ಚಿತ್ರಕೃಪೆ: ಗಾರ್ಡಿಯನ್)
ಅಡಿಲೇಡ್ ನಲ್ಲಿ ನಡೆದ ಸಾಮೂಹಿಕ ಮೇಣದಬತ್ತಿಯ ಶ್ರದ್ಧಾಂಜಲಿ (ಚಿತ್ರಕೃಪೆ: ಗಾರ್ಡಿಯನ್)

ಸಿಡ್ನಿ: ಈಗ ಎಲ್ಲೆಡೆ ನಿರಾಶ್ರಿತರ ಪರವಾಗಿ ದನಿ ಕೇಳಿಬರುತ್ತಿದೆ. ಅಯ್ಲಾನ್ ಕುರ್ದಿ ಸಾವಿನ ಹಿನ್ನೆಲೆಯಲ್ಲಿ ಮತ್ತು ವಲಸಿಗರು ಯುರೋಪಿಯನ್ ದೇಶಗಳತ್ತ ಆಶ್ರಯ ಅರಸಿ ಬರುತ್ತಿರುವವರು  ಎದುರಿಸುತ್ತಿರುವ ಸಂಕಟಗಳನ್ನು ನಿವಾರಿಸುವುದಕ್ಕೆ ಆಗ್ರಹಿಸಿ ಸಿಡ್ನಿಯಲ್ಲಿ ಸೋಮವಾರ ರಾತ್ರಿ 10000 ಮಂದಿ ಉರಿಯುವ ಮೇಣದ ಬತ್ತಿಯೊಂದಿಗೆ ಪ್ರದರ್ಶನ ನಡೆಸಿದರು.

`ನನ್ನ ಮನೆಯಲ್ಲಿ ಒಂದು ರೂಮ್ ಇದೆ. ನೀವು ಬರಬಹುದು' ಎಂಬ ಪುಟ್ಟ ಬಾಲಕ ಹಿಡಿದ ಭಿತ್ತಿ ಪತ್ರ ಇಡೀ ಪ್ರದರ್ಶನದ ಆಕರ್ಷಣೆಯಾಗಿತ್ತು. ನೀವು ಆಸ್ಟ್ರೇಲಿಯಾಕ್ಕೆ ಬನ್ನಿ ಎಂಬ ಆಹ್ವಾನದ  ಭಿತ್ತಿ ಪತ್ರಗಳು ಘೋಷಣೆಗಳು ಎಲ್ಲೆಡೆ ಕಾಣಿಸುತ್ತಿತ್ತು ಮತ್ತು ಕೇಳಿಸುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com