
ಬೀಜಿಂಗ್ : ಇತ್ತೀಚೆಗೆ ಬಿಡುಗಡೆ ಮಾಡಿರುವ ಐಫೋನ್ 6ಎಸ್ ಖರೀದಿಸಲು ಹಣವಿಲ್ಲದ ಚೀನಾದ ಜೈಂಗ್ಸು ಪ್ರಾಂತ್ಯದ ಇಬ್ಬರು ಕಿಡ್ನಿ ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಆಘಾತಕಾರಿ ಘಟನೆ ವರದಿ ಆಗಿದೆ.
ಐಫೋನ್ 6ಎಸ್ ಖರೀದಿಸಲು ಬೇಕಾದಷ್ಟು ಹಣ ಇಲ್ಲವೆಂದು 'ವು' ಎಂಬಾತ ಸ್ನೇಹಿತ ಹುವಾಂಗ್‌ಗೆ ಈ ವಿಷಯ ತಿಳಿಸಿದ್ದ. ಇದಕ್ಕೆ ಆತ ಕಿಡ್ನಿ ಮಾರಾಟ ಮಾಡಿ ಹಣ ಗಳಿಸುವಂತೆ ಸ್ನೇಹಿತನಿಗೆ ಸಲಹೆ ನೀಡಿದ್ದ ಎಂದು ಚೀನಾ ಡೈಲಿ ಆನ್ ವರದಿ ಮಾಡಿದೆ.
ಇಂಟರ್ನೆಟ್ ಮೂಲಕ ಕಿಡ್ನಿ ಮಾರಾಟ ಮಾಡುವ ಏಜೆಂಟ್ ಅನ್ನು ಪರಿಚಯ ಮಾಡಿಕೊಂಡ ಇಬ್ಬರು, ಆತನ ಸೂಚನೆ ಮೇರೆಗೆ ಸೆಪ್ಟೆಂಬರ್ 12ರಂದು ವೈದ್ಯಕೀಯ ತಪಾಸಣೆಗಾಗಿ ನಾನ್‌ಜಿಂಗ್ ಆಸ್ಪತ್ರೆಗೆ ಬಂದಿದ್ದರು. ಆದರೆ, ಏಜೆಂಟ್ ಆ ದಿನ ಆಸ್ಪತ್ರೆಗೆ ಬರಲಿಲ್ಲ. ನಂತರ ಕಿಡ್ನಿ ಮಾರಾಟ ಮಾಡುವ ನಿರ್ಧಾರವನ್ನು ವು ಎಂಬಾತ ಬದಲಿಸಿದ. ಆದರೆ, ಸ್ನೇಹಿತ ಹುವಾಂಗ್ ಅದಕ್ಕೆ ಸಮ್ಮತಿಸಲಿಲ್ಲ. ಇದರಿಂದ ಬೇಸತ್ತ ವು ಪೊಲೀಸರ ಮೊರೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ . ಸದ್ಯ ತಲೆಮರೆಸಿಕೊಂಡಿರುವ ಹುವಾಂಗ್ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.
Advertisement