ಪಾಕ್ ವಾಯುಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 13 ಉಗ್ರರ ಹತ್ಯೆ

ಪಾಕಿಸ್ತಾನದ ಪೇಶಾವರ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಪಾಕ್ ಸೇನೆ ನಡೆಸಿದ ಗುಂಡಿನ...
ಪಾಕಿಸ್ತಾನ ಸೇನೆ
ಪಾಕಿಸ್ತಾನ ಸೇನೆ
ಪೇಶಾವರ: ಪಾಕಿಸ್ತಾನದ ಪೇಶಾವರ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಪ್ರತಿಯಾಗಿ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ 13 ಭಯೋತ್ಪಾದಕರು ಬಲಿಯಾಗಿದ್ದಾರೆ.  
ಪಾಕಿಸ್ತಾನದ ವಾಯು ಸೇನೆ ಶಿಬಿರವನ್ನು ಗುರಿಯಾಗಿರಿಸಿಕೊಂಡು 14 ಮಂದಿ ಶಸ್ತ್ರಸರ್ಜಿತ ಭಯೋತ್ಪಾದಕರ ತಂಡ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಪಾಕ್ ಸೇನೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದು, ಗುಂಡಿನ ಕಾಳಗದಲ್ಲಿ ಇಬ್ಬರು ಪಾಕ್ ಸೈನಿಕರು, 13 ಉಗ್ರರು ಸೇರಿ 15 ಮಂದಿ ಮೃತಪಟ್ಟಿದ್ದಾರೆ.
ವಾಯು ಸೇನೆ ಶಿಬಿರವನ್ನು ಸುತ್ತುವರೆದಿರುವ ಪಾಕ್ ಸೇನೆ ಉಗ್ರರ ವಿರುದ್ಧ ನಿರಂತರ ಗುಂಡಿನ ದಾಳಿ ನಡೆಸಿದೆ.
ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com