ಭಾರತದಲ್ಲಿರುವ ಕಾಲ್ ಸೆಂಟರ್ ಗಳನ್ನು ಮುಚ್ಚಲು ಬ್ರಿಟಿಷ್ ಟೆಲಿಕಾಂ ಚಿಂತನೆ

ಟೆಲಿಕಾಂ ದೈತ್ಯ ಬ್ರಿಟಿಷ್ ಟೆಸಿಕಾಂ ಭಾರತದಲ್ಲಿರುವ ತನ್ನ ಕಂಪನಿಯ ಎಲ್ಲಾ ಕಾಲ್ ಸೆಂಟರ್ ಗಳನ್ನು ಮುಚ್ಚಲು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಟೆಲಿಕಾಂ ದೈತ್ಯ ಬ್ರಿಟಿಷ್ ಟೆಸಿಕಾಂ ಭಾರತದಲ್ಲಿರುವ ತನ್ನ ಕಂಪನಿಯ ಎಲ್ಲಾ ಕಾಲ್ ಸೆಂಟರ್ ಗಳನ್ನು ಮುಚ್ಚಲು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದೆ.

ಭಾರತದಲ್ಲಿ ಬ್ರಿಟಿಷ್ ಟೆಲಿಕಾಂ ಕಂಪನಿಯ ಕಾಲ್ ಸೆಂಟರ್ ಗಳಲ್ಲಿ ಗ್ರಾಹಕರಿಗೆ ಅಗತ್ಯವಾದ ಸೇವೆಯನ್ನು ಒದಗಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಂಡಿದೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಬ್ರಿಟಿಷ್ ಟೆಲಿಕಾಂ ನ ಕಚೇರಿಗಳಿವೆ. ಆದರೆ ಬಹುತೇಕ ಗ್ರಾಹಕರ ಸಮಸ್ಯೆಗೆ ಅಂದರೆ ಶೇ. 80 ರಷ್ಟು ಕರೆಗಳಿಗೆ ಲಂಡನ್ ನಲ್ಲಿರುವ ಕಾಲ್ ಸೆಂಟರ್ ನಿಂದಲೇ ಉತ್ತರ ನೀಡಲಾಗುತ್ತಿದೆ ಎಂದು ಬ್ರಿಟಿಷ್ ಟೆಲಿಕಾಂ ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ಜಾನ್ ಪೀಟರ್ ತಿಳಿಸಿದ್ದಾರೆ,

2004 ರಿಂದ ಸುಮಾರು 10 ಮಿಲಿಯನ್ ಲಂಡನ್ ಗ್ರಾಹಕರು ದೆಹಲಿ ಮತ್ತು ಬೆಂಗಳೂರಿನ ಕಾಲ್ ಸೆಂಟರ್ ಗಳಿಂದ ಸೇವೆ ಪಡೆಯುತ್ತಿದ್ದರು. ಈ ವರ್ಷದ ಆರಂಭದಲ್ಲಿ ಬಿ.ಟಿ ಮೊಬೈಲ್ ಆರಂಭಿಸಿದ್ದು ಅದರ ಗ್ರಾಹಕರ ಸೇವಾ ಕೇಂದ್ರವನ್ನು ಲಂಡನ್ ನಲ್ಲಿಯೇ  ಆರಂಭಿಸಲಾಗಿದ್ದು. ಉತ್ತಮ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com