ಹಜ್ ಯಾತ್ರೆ ಇಂದಿನಿಂದ ಶುರು

ಮುಸ್ಲಿಮರ ಹಜ್ ಯಾತ್ರೆ ಮಂಗಳವಾರದಿಂದ ಆರಂಭವಾಗಲಿದೆ...
ಪವಿತ್ರ ಮೆಕ್ಕಾ (ಸಂಗ್ರಹ ಚಿತ್ರ)
ಪವಿತ್ರ ಮೆಕ್ಕಾ (ಸಂಗ್ರಹ ಚಿತ್ರ)

ಮೆಕ್ಕಾ: ಮುಸ್ಲಿಮರ ಹಜ್ ಯಾತ್ರೆ ಮಂಗಳವಾರದಿಂದ ಆರಂಭವಾಗಲಿದೆ.

ವಿಶ್ವಾದ್ಯಂತದ 30 ಲಕ್ಷ ಯಾತ್ರಿಗಳು ಮೀನಾದ ಕಅಬಾದಲ್ಲಿ ಸೇರಲಿದ್ದು, 5 ದಿನಗಳ ಕಾಲ ಯಾತ್ರೆ ಮುಂದುವರಿಯಲಿದೆ. ಮುಂದಿನ ಶನಿವಾರ ಸೈತಾನನಿಗೆ ಕಲ್ಲು ಬಿಸಾಕುವ ಪ್ರಕ್ರಿಯೆ  ಮೂಲಕ ಹಜ್ ಯಾತ್ರೆಗೆ ತೆರೆ ಬೀಳಲಿದೆ. ವಿಶ್ವದ ಅತಿದೊಡ್ಡ ಯಾತ್ರೆಗಳಲ್ಲಿ ಒಂದಾದ ಹಜ್‍ಗೆ ಈ ಬಾರಿ ಐಎಸ್ ಐಎಸ್ ಉಗ್ರರ ಬೆದರಿಕೆ ಇದ್ದು, ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ಮೆಕ್ಕಾದಲ್ಲಿ ಭಾರಿ ಬಂದೋಬಸ್ತ್ ಕೈಗೊಂಡಿದೆ.

ಮಸೀದಿಯ ಸುತ್ತಲೂ 5 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು  ಕಾಯಲಾಗುತ್ತಿದೆ. ಈ ಬಾರಿ 1.5 ಲಕ್ಷ ಭಾರತೀಯರು ಯಾತ್ರೆ ಕೈಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com