ಯುಬಿಎಸ್ ವಿಶ್ಲೇಷಣೆ: ನ್ಯೂಯಾರ್ಕ್ ದುಬಾರಿ ನಗರ

ಜಗತ್ತಿನಲ್ಲಿ ಜೀವನ ನಡೆಸಲು ಅತ್ಯಂತ ದುಬಾರಿ ನಗರ ಯಾವುದು ಗೊತ್ತಾ? ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್. ಯುಬಿಎಸ್ ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಶ ತಿಳಿದುಬಂದಿದೆ...
ದುಬಾರಿ ನ್ಯೂಯಾರ್ಕ್ ನಗರ (ಸಂಗ್ರಹ ಚಿತ್ರ)
ದುಬಾರಿ ನ್ಯೂಯಾರ್ಕ್ ನಗರ (ಸಂಗ್ರಹ ಚಿತ್ರ)
Updated on

ನವದೆಹಲಿ: ಜಗತ್ತಿನಲ್ಲಿ ಜೀವನ ನಡೆಸಲು ಅತ್ಯಂತ ದುಬಾರಿ ನಗರ ಯಾವುದು ಗೊತ್ತಾ? ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್. ಯುಬಿಎಸ್ ನಡೆಸಿರುವ ವಿಶ್ಲೇಷಣೆಯಲ್ಲಿ ಈ ಅಂಶ  ತಿಳಿದುಬಂದಿದೆ.

ಈ ಮಾಯಾನಗರಿಯಲ್ಲಿ ಸರಕು ಮತ್ತು ಸೇವಾ ತೆರಿಗೆಗಳು ಭಾರಿ ದುಬಾರಿ. ಜ್ಯೂರಿಚ್ ಮತ್ತು ಜಿನೀವಾ ನಂತರ ಸ್ಥಾನದಲ್ಲಿವೆ. ಸ್ವಿಜರ್‍ಲೆಂಡ್‍ನ ಈ ಎರಡೂ ನಗರಗಳು ಕಳೆದ ವರ್ಷಕ್ಕಿಂತಲೂ ಈ  ವರ್ಷ ಹೆಚ್ಚು ದುಬಾರಿಯಾಗಿವೆ. ಆದರೆ ಮನೆ ಬಾಡಿಗೆಯನ್ನೂ ಸೇರಿಸಿದರೆ ಈ ನಗರಗಳು ನ್ಯೂಯಾರ್ಕ್‍ಗಿಂತ ಪರವಾಗಿಲ್ಲ. ಅಮೆರಿಕದ ಷಿಕಾಗೊ ಈ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದರೆ,  ಮಿಯಾಮಿ (11), ಲಾಸ್‍ಎಂಜಲೀಸ್ (13)ನೇ ಸ್ಥಾನದಲ್ಲಿವೆ.

ಕಳೆದ ವರ್ಷ 71 ನಗರಗಳ ಸಮೀಕ್ಷೆ ನಡೆಸಲಾಗಿದೆ. ಉಕ್ರೇನ್‍ನ ಕೀವ್ ಮತ್ತು ಬಲ್ಗೇರಿಯಾ ರಾಜಧಾನಿ ಸೊಫಿಯಾ ಅತಿ ಕಡಿಮೆ ವೆಚ್ಚದ ನಗರಗಳಾಗಿವೆ. ಸ್ವಿಜರ್ ಲೆಂಡ್‍ನ ನಗರಗಳಿಗೆ  ಹೋಲಿಸಿದರೆ ಈ ನಗರಗಳಲ್ಲಿ ದರಗಳು 2.5 ಪಟ್ಟು ಕಡಿಮೆ. ಜ್ಯೂರಿಚ್, ಜಿನೀವಾ ಮತ್ತು ನ್ಯೂಯಾಕ್ರ್ ನಲ್ಲಿ ವೇತನಗಳೂ ಅಷ್ಟೇ ಪ್ರಮಾಣದಲ್ಲಿವೆ. ನೈರೋಬಿ, ಜಕಾರ್ತ ಮತ್ತು ಕೀವ್‍ಗೆ ಹೋಲಿಸಿದರೆ ಈ ದುಬಾರಿ ನಗರಗಳಲ್ಲಿನ ವೇತನ 19 ಪಟ್ಟು ಹೆಚ್ಚು.

ಸ್ವಿಜರ್‍ಲೆಂಡ್ ನಗರಗಳಲ್ಲಿ ಮನೆಗಾಗಿ ಖರೀದಿ ಪ್ರಮಾಣವೂ ಹೆಚ್ಚು. ಇಲ್ಲಿ ವರ್ಷಕ್ಕೆ 20 ಬ್ಯಾಸ್ಕೆಟ್ ಖರೀದಿಸಿದರೆ ಅಮೆರಿಕದಲ್ಲಿ 18, ಲಂಡನ್ ಮತ್ತು ಓಸ್ಲೊದಲ್ಲಿ 12 ಬ್ಯಾಸ್ಕೆಟ್ ಖರೀದಿಸುತ್ತಾರೆ.  ಒಂದು ಐಫೋನ್ 6 ಖರೀದಿಸಲು ನ್ಯೂಯಾರ್ಕ್‍ನ ಜನ 24 ಗಂಟೆ, ಜಿನೀವಾದಲ್ಲಿರುವವರು 20.6 ಗಂಟೆ ಕೆಲಸ ಮಾಡಿದರೆ ಸಾಕು. ಇದಕ್ಕಾಗಿ ಚೀನಾದ ಶಾಂಘೈನವರು 163.8 ಗಂಟೆ,  ಪಿಲಿಫೈನ್ಸ್ ನ ಮನಿಲಾದಲ್ಲಿರುವವರು ಗಂಟೆಗಿಂತಲೂ ಹೆಚ್ಚು ಕೆಲಸ ಮಾಡುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com