ವಿಶ್ವ ಸಂಸ್ಥೆ ಮುಂದೆ ಭಾರತೀಯರಿಂದಲೇ ಮೋದಿ ವಿರುದ್ಧ ಪ್ರತಿಭಟನೆ

ಪಟೇಲರು, ಗುಜರಾತ್ ನಲ್ಲಿ ತಮ್ಮ ಸಮುದಾಯದವರ ವಿರುದ್ಧ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ಖಂಡಿಸಿ...
ವಿಶ್ವ ಸಂಸ್ಥೆ ಮುಂದೆ ಪ್ರತಿಭಟನೆ ನಡೆಸಿದ ಸಿಖ್ ಮತ್ತು ಪಟೇಲ್ ಜನಾಂಗದವರು
ವಿಶ್ವ ಸಂಸ್ಥೆ ಮುಂದೆ ಪ್ರತಿಭಟನೆ ನಡೆಸಿದ ಸಿಖ್ ಮತ್ತು ಪಟೇಲ್ ಜನಾಂಗದವರು

ನ್ಯೂಯಾರ್ಕ್: ಶುಕ್ರವಾರ ವಿಶ್ವಸಂಸ್ಥೆ ಹೊರಗೆ ಪ್ರಧಾನಿ ಮೋದಿ ವಿರುದ್ಧ ಪಟೇಲ್, ಸಿಖ್ ಸಮುದಾಯ ಪ್ರತಿಭಟನೆ ನಡೆಸಿತು.

ಪಟೇಲರು, ಗುಜರಾತ್ ನಲ್ಲಿ ತಮ್ಮ ಸಮುದಾಯದವರ ವಿರುದ್ಧ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ಮೀಸಲು ನೀತಿ ಪರಿಶೀಲನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಇವರು ಪೊಲೀಸ್ ದಬ್ಬಾಳಿಕೆ ವಿರೋಧಿಸುವ ಫಲಕಗಳ ಜತೆಗೆ ಮೋದಿಗೆ ಸ್ವಾಗತಕೋರುವ ಫಲಕಗಲನ್ನೂ ಹಿಡಿದುಕೊಂಡಿದ್ದರು.

ಇನ್ನೊಂದೆಡೆ ಸೇರಿದ್ದ 200ರಷ್ಟು ಸಿಖ್ಖರು, ಪಂಜಾಬ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಪ್ರತ್ಯೇಕ ಖಾಲಿಸ್ತಾನಕ್ಕೆ 2020ರಲ್ಲಿ ಜನಮತ ಸಂಗ್ರಹವಾಗಬೇಕು ಎಂದು ಆಗ್ರಹಸಿದರು. ಜತೆಗೆ ಭಾರತ ಹಾಗೂ ಮೋದಿ ವಿರೋಧಿ ಘೋಷಣೆ ಕೂಗಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com