ಎಡ್ವರ್ಡ್ ಸ್ನೋಡೆನ್ ಅವರ ಮೊದಲ ಟ್ವೀಟ್: 'ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?'

ಒಂದು ಕಾಲದಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಏಜೆನ್ಸಿಯ(ಎನ್ ಎಸ್ ಎ) ಜೊತೆಗೆ ಇದ್ದು ನಂತರ ಆ ಸಂಸ್ಥೆ ನಡೆಸುವ ಬೇಹುಗಾರಿಕೆಯನ್ನು ಬಯಲಿಗೆಳೆದಿದ್ದ
ಎಡ್ವರ್ಡ್ ಸ್ನೋಡೆನ್
ಎಡ್ವರ್ಡ್ ಸ್ನೋಡೆನ್

ಜೊಹ್ಯಾನ್ನಸ್ ಬರ್ಗ್: ಒಂದು ಕಾಲದಲ್ಲಿ ಅಮೆರಿಕಾದ ರಾಷ್ಟ್ರೀಯ ಭದ್ರತಾ ಏಜೆನ್ಸಿಯ(ಎನ್ ಎಸ್ ಎ) ಜೊತೆಗೆ ಇದ್ದು ನಂತರ ಆ ಸಂಸ್ಥೆ ನಡೆಸುವ ಬೇಹುಗಾರಿಕೆಯನ್ನು ಬಯಲಿಗೆಳೆದಿದ್ದ ಎಡ್ವರ್ಡ್ ಸ್ನೋಡೆನ್ ಇತ್ತೀಚೆಗಷ್ಟೇ ಮೈಕ್ರೋಬ್ಲಾಗಿಂಗ್ ಸಾಮಾಜಿಕ ಅಂತರ್ಜಾಲ ತಾಣ ಟ್ವಿಟ್ಟರ್ ಸೇರಿದ್ದಾರೆ ಮತ್ತು ಎನ್ ಎಸ್ ಎ ಅನ್ನು ಹಿಂಬಾಲಿಸುತ್ತಿದ್ದಾರೆ.

ಎನ್ ಎಸ್ ಎ ಯ ಮಾಜಿ ಕಾಂಟ್ರ್ಯಾಕ್ಟರ್ ಸ್ನೋಡೆನ್ ಟ್ವಿಟ್ಟರ್ ಗೆ ಬಂದ ಕೆಲವೇ ಘಂಟೆಗಳಲ್ಲಿ ೧,೮೫,೦೦೦ ಅನುಯಾಯಿಗಳನ್ನು ಪಡೆದುಕೊಂಡಿದ್ದಾರೆ ಮತ್ತು ಮೊದಲನೆಯ ಟ್ವೀಟ್ ಆಗಿ 'ನಾನು ಹೇಳುತ್ತಿರುವುದು ಕೇಳಿಸುತ್ತಿದೆಯೇ?' ಎಂದು ಬರೆದಿದ್ದಾರೆ ಎಂದು ನ್ಯೂಸ್೨೪ ವರದಿ ಮಾಡಿದೆ.

ಎನ್ ಎಸ್ ಎ ಬೇಹುಗಾರಿಕೆಯ ಹಲವಾರು ಪ್ರಮುಖ ಕಡತಗಳನ್ನು ಸೋರಿಕೆ ಮಾಡಿದ್ದ ಸ್ನೋಡೆನ್ ವಿರುದ್ದ ಅಮೆರಿಕಾದಲ್ಲಿ ಹಲವಾರು ಪ್ರಕರಣಗಳಿದ್ದು ಅವರು ಸದ್ಯಕ್ಕೆ ರಶ್ಯಾದಲ್ಲಿ ರಾಜಕೀಯ ಆಶ್ರಯ ಪಡೆದಿದ್ದಾರೆ.

ಅಮೆರಿಕದಲ್ಲಿರುವ ಸ್ನೋಡೆನ್ ವಿರುದ್ಧ ಇರುವ ಆರೋಪಗಳು ಸಾಬೀತಾದರೆ, ೩೦ ವರ್ಷಗಳ ಜೈಲು ಸಜೆ ಅನುಭವಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com