ಭಾರತ ಉದ್ದೇಶಪೂರ್ವಕವಾಗಿ ನೇಪಾಳಕ್ಕೆ ಇಂಧನ ಪೂರೈಕೆ ತಡೆಯುತ್ತಿದೆ: ಕೆಪಿ ಓಲಿ

ನೇಪಾಳದ ಯುಎಂಎಲ್‌ನ ಪ್ರಬಾವಿ ನಾಯಕ ಕೆಪಿ ಶರ್ಮಾ ಓಲಿ, ಭಾರತ ನೇಪಾಳಕ್ಕೆ ಅಗತ್ಯವಿರುವ ಪ್ರಮುಖ ಸರಕುಗಳನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ.
ಕೆ.ಪಿ ಓಲಿ
ಕೆ.ಪಿ ಓಲಿ

ಕಠ್ಮಂಡು: ನೇಪಾಳದ ಮುಂದಿನ ಸಂಭಾವ್ಯ ಪ್ರಧಾನಿಯೆಂದೇ ಬಿಂಬಿತವಾಗಿರುವ ಯುಎಂಎಲ್‌ನ ಪ್ರಬಾವಿ ನಾಯಕ ಕೆ.ಪಿ ಓಲಿ, ಭಾರತ ನೇಪಾಳಕ್ಕೆ ಅಗತ್ಯವಿರುವ ಪ್ರಮುಖ ಸರಕುಗಳನ್ನು ತಡೆಹಿಡಿಯುತ್ತಿದೆ ಎಂದು ಆರೋಪಿಸಿದ್ದಾರೆ.

ಅಲ್ಲಿನ ಸರ್ಕಾರ ಹೊಸ ಇಂಧನ ನಿಯಮಗಳನ್ನು ವಿಧಿಸಿರುವುದರಿಂದ ಕಳೆದ ಒಂದು ವಾರದಿಂದ ಭಾರತ ನೇಪಾಳಕ್ಕೆ ಉದ್ದೇಶಪೂರ್ವಕವಾಗಿ ಇಂಧನ ಪೂರೈಕೆಗೆ ತಡೆಯೊಡ್ಡುತ್ತಿದೆ ಎಂದು ಓಲಿ ಆರೋಪಿಸಿದ್ದಾರೆ. ನೇಪಾಳದಲ್ಲಿ ಜಾರಿಗೊಳಿಸಲಾಗಿರುವ ಹೊಸ ಸಂವಿಧಾನದ ಕೆಲ ಅಂಶಗಳನ್ನು ವಿರೋಧಿಸಿ ಪ್ರತಿಭಟನೆ ಭುಗಿಲೆದ್ದಿರುವುದರಿಂದ ಭಾರತ ಕೆಲವು ಸರಕು ತುಂಬಿದ ಟ್ರಕ್ ಗಳಿಗೆ ತಡೆಯೊಡ್ಡಿತ್ತು.   

ಆಡಾಳಿತಾರೂಢ ಯುಎಂಎಲ್ ಪಕ್ಷದ ಮುಖ್ಯಸ್ಥರಾಗಿರುವ ಕೆಪಿ ಓಲಿ, ಸರಕು ತಡೆಗಟ್ಟಲು ಪ್ರತಿಭಟನಾನಿರತರಿಗಿಂಟಲೂ ಭಾರತವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಸರಕು ಟ್ರಕ್ ಗಳು ನೇಪಾಳ ಪ್ರವೇಶಿಸದಂತೆ ತಡೆಯೊಡ್ಡುವ ಮೂಲಕ ಭಾರತ ನೇಪಾಲದ ಹೊಸ ಸಂವಿಧಾನ ಜಾರಿಗೆ ಪರೋಕ್ಷ ಪ್ರತಿಭಟನೆ ನಡೆಸುತ್ತಿದೆ ಎಂದು ಸಂದರ್ಶನವೊಂಡರಲ್ಲಿ ಓಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com