ನಕಲಿ ವೀಸಾ: 306 ಭಾರತೀಯ ವಿದ್ಯಾರ್ಥಿಗಳ ಗಡಿಪಾರು ಸಾಧ್ಯತೆ

ನಕಲಿ ವೀಸಾ ಹೊಂದಿರುವ ಆರೋಪದ ಮೇಲೆ ಸುಮಾರು 306 ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗುತ್ತದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಾಷಿಂಗ್ಟನ್: ನಕಲಿ ವೀಸಾ ಹೊಂದಿರುವ ಆರೋಪದ ಮೇಲೆ ಸುಮಾರು 306 ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಲಾಗುತ್ತದೆ ಎಂದು ಅಮೆರಿಕದ ಏಜೆನ್ಸಿ ಹೇಳಿದೆ.
ಇತ್ತೀಚೆಗೆ ಅಮೆರಿಕದ ಕಾನೂನು ಏಜೆನ್ಸಿ ನಕಲಿ ವಿಶ್ವವಿದ್ಯಾಲಯದ ಬಗ್ಗೆ ಸ್ಟಿಂಗ್ ಆಪರೇಷನ್ ನಡೆಸಿದಾಗ, ನಕಲಿ ವೀಸಾ ಹಗರಣ ಬಯಲಿಗೆ ಬಂದಿದೆ. ಇದರಲ್ಲಿ 306ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ನಕಲಿ ವೀಸಾ ಹೊಂದಿರುವುದಾಗಿ ತಿಳಿದು ಬಂದಿದೆ. ನದರನ್ ನ್ಯೂ ಜೆರ್ಸಿ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಪಡೆಯಲು ನಕಲಿ ವೀಸಾ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. 
ವೀಸಾ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಭಾರತ-ಅಮೆರಿಕ ಮೂಲದ 21 ಮಂದಿಯನ್ನು ಬಂಧಿಸಲಾಗಿದ್ದು, 1,000 ವಿದೇಶಿಯರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ. 
ಬಂಧಿತರು ದಳ್ಳಾಳಿಗಳು, ನೇಮಕಾತಿ ಮಾಡುವವರು ಹಾಗೂ ಉದ್ಯೋಗಿಗಳಾಗಿದ್ದಾರೆ. ಇವರು 26 ದೇಶಗಳ 1,000 ವಿದೇಶಿಯರಿಗೆ ವಿದ್ಯಾರ್ಥಿ ವೀಸಾ ಮತ್ತು ವಿದೇಶಿ ಉದ್ಯೋಗಿ ವೀಸಾ ಕೊಡಿಸುತ್ತಿದ್ದರು. ಅಷ್ಟೇ ಅಲ್ಲದೇ, ನ್ಯೂಜೆರ್ಸಿ ವಿಶ್ವವಿದ್ಯಾಲಯದಲ್ಲಿ ನಕಲಿ ವೀಸಾ ಆಧಾರದ ಮೇಲೆ ದಾಖಲಾತಿ ಮಾಡಿಸುತ್ತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com