ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿದ್ದ ಹ್ಯಾಟ್ ಧರಿಸಿದ ವ್ಯಕ್ತಿ ನಾನೇ: ಮೊಹಮ್ಮದ್ ಅಬ್ರಿನಿ

ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಮುನ್ನ ಅಲ್ಲಿ ಕಾಣಿಸಿಕೊಂಡ ಹ್ಯಾಟ್ ಧರಿಸಿದ ವ್ಯಕ್ತಿ ನಾನೇ ಎಂದು ಪ್ಯಾರಿಸ್ ದಾಳಿಯ...
ಮೊಹಮ್ಮದ್ ಅಬ್ರಿನಿ
ಮೊಹಮ್ಮದ್ ಅಬ್ರಿನಿ
 ಬ್ರುಸೆಲ್ಸ್: ಬ್ರುಸೆಲ್ಸ್ ವಿಮಾನ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಮುನ್ನ ಅಲ್ಲಿ ಕಾಣಿಸಿಕೊಂಡ ಹ್ಯಾಟ್ ಧರಿಸಿದ ವ್ಯಕ್ತಿ ನಾನೇ ಎಂದು ಪ್ಯಾರಿಸ್ ದಾಳಿಯ ಶಂಕಿತ ಆರೋಪಿ ಮೊಹಮ್ಮದ್ ಅಬ್ರಿನಿ ಹೇಳಿದ್ದಾರೆ.
ಬ್ರುಸೆಲ್ಸ್ ಬಾಂಬ್ ಸ್ಫೋಟಕ್ಕೆ ಮುನ್ನ ಸಂಶಯಾಸ್ಪದವಾಗಿ ಅಡ್ಡಾಡುತ್ತಿದ್ದ ಹ್ಯಾಟ್ ಧರಿಸಿದ ವ್ಯಕ್ತಿಯೊಬ್ಬನ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಶುಕ್ರವಾರ ಅಬ್ರಿನಿಯನ್ನು ಬ್ರುಸೆಲ್ಸ್ ನಲ್ಲಿ ಬಂಧಿಸಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ.
130 ಜನರ ಸಾವಿಗೆ ಕಾರಣವಾದ ಪ್ಯಾರಿಸ್ ದಾಳಿಯ ರೂವಾರಿ ಅಬ್ರಿನಿ ಎಂದು ಹೇಳಲಾಗುತ್ತಿದೆ. ಅದೇ ವೇಳೆ ಮಾರ್ಚ್ 22 ರಂದು ನಡೆದ ಬ್ರುಸೆಲ್ಸ್ ದಾಳಿಗೆ ಸಂಬಂಧಿಸಿದಂತೆ ಸ್ವೀಡನ್ ಪ್ರಜೆ ಒಸಾಮಾ ಕ್ರಯೇಮ್ ಅವರನ್ನೂ ಬಂಧಿಸಲಾಗಿದೆ. ಬ್ರುಸೆಲ್ಸ್ ನಲ್ಲಿ ನಡೆದ ದಾಳಿಯಲ್ಲಿ 32 ಮಂದಿ ಸಾವಿಗೀಡಾಗಿದ್ದರು.
ಅಬ್ರಿನಿ ಸೇರಿದಂತೆ 6 ಮಂದಿಯನ್ನು ಶುಕ್ರವಾರ ಬಂಧಿಸಿದ್ದು ಇದರಲ್ಲಿ ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ. ಇನ್ನಿಬ್ಬರು ಅಬ್ರಿನಿ ಮತ್ತು ಕ್ರಯೇಮ್‌ಗೆ ಸಹಾಯ ಮಾಡುತ್ತಿದ್ದರು ಎಂದು ಶಂಕಿಸಲಾಗುತ್ತಿದ್ದು, ವಿಚಾರಣೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com