ಉಗ್ರ ದಾಳಿ ಭೀತಿ: ಕಟ್ಟೆಚ್ಚರದಿಂದ ಇರುವಂತೆ ಅಮೆರಿಕ ಪ್ರಜೆಗಳಿಗೆ ಎಚ್ಚರಿಕೆ

ಪಾಕಿಸ್ತಾನದಲ್ಲಿ ಮತ್ತೊಂದು ಉಗ್ರ ದಾಳಿ ಕುರಿತು ಭೀತಿ ಆರಂಭವಾಗಿದ್ದು, ಇಸ್ಲಾಮಾಬಾದ್ ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಅಲ್ಲಿನ ರಾಯಭಾರ ಕಚೇರಿ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ..
ಇಸ್ಲಾಮಾಬಾದ್ ನ ಮ್ಯಾರಿಯಟ್ ಹೊಟೆಲ್ (ಸಂಗ್ರಹ ಚಿತ್ರ)
ಇಸ್ಲಾಮಾಬಾದ್ ನ ಮ್ಯಾರಿಯಟ್ ಹೊಟೆಲ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೊಂದು ಉಗ್ರ ದಾಳಿ ಕುರಿತು ಭೀತಿ ಆರಂಭವಾಗಿದ್ದು, ಇಸ್ಲಾಮಾಬಾದ್ ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಅಲ್ಲಿನ ರಾಯಭಾರ  ಕಚೇರಿ ಅಧಿಕಾರಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ನಲ್ಲಿರುವ ಪ್ರತಿಷ್ಠಿತ ಮ್ಯಾರಿಯಟ್ ಹೊಟೆಲ್ ಮೇಲೆ ಉಗ್ರರು ದಾಳಿ ನಡೆಸುವ ಶಂಕೆ ಇದ್ದು ಈ ಭಾಗದ ಪ್ರಯಾಣವನ್ನು  ನಿಯಂತ್ರಿಸುವಂತೆ ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳು ಎಚ್ಚರಿಕೆ ರವಾನಿಸಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನ ಸುದ್ದಿ ಸಂಸ್ಥೆ ಡಾನ್ ಮ್ಯಾರಿಯಟ್ ಹೊಟೆಲ್  ಮೇಲೆ ಉಗ್ರ ದಾಳಿ ನಡೆಯುವ ಶಂಕೆ ವ್ಯಕ್ತಪಡಿಸಿತ್ತು,

ಹೀಗಾಗಿ ಪ್ರಸ್ತುತ ಹೊಟೆಲ್ ನ ಭದ್ರತಾ ವ್ಯವಸ್ಥೆಯನ್ನು ಹೆಚ್ಚುಗೊಳಿಸಲಾಗಿದ್ದು, ಪಾಕಿಸ್ತಾನ ಸರ್ಕಾರ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಹೊಟೆಲ್ ನಲ್ಲಿನ  ಭದ್ರತೆ ಹೆಚ್ಚು ಮಾಡಿದ್ದಾರೆ. ಇನ್ನು ಹೊಟೆಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭದ್ರತಾ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಹೊಟೆಲ್ ಗೆ ವ್ಯಾಪಕ ಭದ್ರತೆ  ಒದಗಿಸಲಾಗಿದೆ.

ಅಮೆರಿಕ ಪ್ರಜೆಗಳ ರಕ್ಷಣೆಯ ನಿಟ್ಟಿನಲ್ಲಿ ಇಸ್ಲಾಮಾಬಾದಿನಲ್ಲಿರುವ ರಾಯಭಾರ ಕಚೇರಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ತನ್ನ ಪ್ರಜೆಗಳೊಂದಿಗೆ  ಇಮೇಲ್ ಮತ್ತು ಸಾಮಾಜಿಕ ಜಾಲತಾಣಗಳ ಮುಖಾಂತರ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮ್ಯಾರಿಯಟ್ ಹೊಟೆಲ್ ಪ್ರದೇಶ  ಮಾತ್ರವಲ್ಲದೇ ಇತರೆ ಪ್ರದೇಶಗಳಲ್ಲಿರುವ ಪ್ರಜೆಗಳೂ ಕೂಡ ಗುಂಪುಗುಂಪಾಗಿ ಚರ್ಚಿಸದಂತೆ ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com