ಭಾರತದ ಕಾಲ್ ಸೆಂಟರ್ ಗಳ ಬಗ್ಗೆ ಟ್ರಂಪ್ ಅಣಕ

ಭಾರತೀಯ ಉಚ್ಚಾರಣಾ ಶೈಲಿಯನ್ನು ಅನುಕರಣೆ ಮಾಡಿ ಭಾರತದ ಕಾಲ್ ಸೆಂಟರ್ ಕಾಲ್ ಸೆಂಟರ್ ಪ್ರತಿನಿಧಿಯನ್ನು ಅಣಕಿಸಿದ್ದಾರೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಭಾರತೀಯ ಉಚ್ಚಾರಣಾ ಶೈಲಿಯನ್ನು ಅನುಕರಣೆ ಮಾಡಿ ಭಾರತದ ಕಾಲ್ ಸೆಂಟರ್ ಪ್ರತಿನಿಧಿಯನ್ನು ಅಣಕಿಸಿದ್ದಾರೆ.
ತಮ್ಮ ಕ್ರೆಡಿಟ್ ಕಾರ್ಡ್ ನ ಗ್ರಾಹಕ ಸೇವೆ ಅಮೆರಿಕದ ಮೂಲದ್ದೋ ಅಥವಾ ಬೇರೆ ರಾಷ್ಟ್ರಗಳಲ್ಲಿದೆಯೋ ಎಂಬುದನ್ನು ಪತ್ತೆ ಮಾಡಲು ಗ್ರಾಹಕ ಸೇವೆ ವಿಭಾಗಕ್ಕೆ ಕರೆ ಮಾಡಿದ ಘಟನೆಯನ್ನು ವಿವರಿಸಿರುವ ಡೊನಾಲ್ಡ್ ಟ್ರಂಪ್, ಭಾರತೀಯ ಕಾಲ್ ಸೆಂಟರ್ ನ್ನು ಗೇಲಿ ಮಾಡುವುದರ ಜೊತೆಗೇ, ಭಾರತವನ್ನು ಅದ್ಭುತ ರಾಷ್ಟ್ರ ಎಂದು ಬಣ್ಣಿಸಿದ್ದಾರೆ.
ತಮ್ಮ ಕ್ರೆಡಿಟ್ ಕಾರ್ಡ್ ನ ಗ್ರಾಹಕ ಸೇವೆ ಭಾರತದಿಂದ ನಿರ್ವಹಿಸಲ್ಪಡುತ್ತಿದ್ದು, ಬೆಂಬಲಿಗರೆದುರು ಗ್ರಾಹಕ ಸೇವಾ ವಿಭಾಗದಿಂದ ಬಂದ ಪ್ರತಿಕ್ರಿಯೆಯನ್ನು ಭಾರತದ ಶೈಲಿಯಲ್ಲಿಯೇ ಅನುಕರಣೆ ಮಾಡಿರುವ ಟ್ರಂಪ್, "ಭಾರತ ಅದ್ಭುತ ರಾಷ್ಟ್ರ, ಅಲ್ಲಿರೊಉವ ನಾಯಕರ ಬಗ್ಗೆ ಅಸಮಾಧಾನ ಇಲ್ಲ. ಆದರೆ ಅಮೆರಿಕಾದಲ್ಲಿರುವ ನಾಯಕರು ಅವಿವೇಕಿಗಳಾಗಿರುವ ಬಗ್ಗೆ ಅಸಮಾಧಾನ ಇದೆ ಎಂದು ಹೇಳಿದ್ದಾರೆ.
ಚೀನಾ, ಜಪಾನ್, ವಿಯೆಟ್ನಾಮ್, ಭಾರತ ಈ ದೇಶಗಳ ಬಗ್ಗೆ ಅಥವಾ ಅಲ್ಲಿನ ನಾಯಕರ ಬಗ್ಗೆ ಅಸಮಾಧಾನ ಇಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಡೆಲಾವೇರ್ ನಲ್ಲಿ ಬೆಂಬಲಿಗರೊಂದಿಗೆ ಮಾತನಾಡುತ್ತಿರಬೇಕಾದರೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಯುಎಸ್ ನ ಡೆಲಾವೇರ್ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್ ಉದ್ಯಮದ ಕೇಂದ್ರವಾಗಿದೆ. " ಭಾರತ, ಚೀನಾ, ಜಪಾನ್ ನಂತಹ ದೇಶಗಳು ಇಲ್ಲಿನ ಉದ್ಯೋಗಗಳನ್ನು ಪಡೆದು ಹಣ ಸಂಪಾದಿಸುತ್ತಿದ್ದಾರೆ. ಮಕ್ಕಳಿಂದ ಸಿಹಿ ತಿನಿಸುಗಳನ್ನು ಕಿತ್ತುಕೊಳ್ಳುವಂತೆ ಅಮೆರಿಕಾದಿಂದ ಉದ್ಯೋಗಗಳನ್ನು ಕಿತ್ತುಕೊಳ್ಳಲು ಚೀನಾ, ಮೆಕ್ಸಿಕೋ, ಜಪಾನ್, ವಿಯೆಟ್ನಾಂ, ಭಾರತಕ್ಕೆ ಅನುವು ಮಾಡಿಕೊಡುವ ನೀತಿಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ನಮ್ಮ ಉದ್ಯೋಗಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ದೇಶದಲ್ಲಿರುವ ಕಾರ್ಖಾನೆಗನ್ನು ಮುಚ್ಚಲಾಗುತ್ತಿದೆ, ಇನ್ನೆಂದೂ ಇಂತಹ ಬೆಳವಣಿಗೆಗಳನ್ನು ಸಹಿಸುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com