ಪಾಕ್ ನಲ್ಲಿ ಸಿಖ್ ರಾಜಕಾರಣಿ ಸರ್ದಾರ್ ಸೂರನ್ ಸಿಂಗ್ ಗುಂಡಿಕ್ಕಿ ಹತ್ಯೆ

ಖ್ಯಾತ ಪಾಕಿಸ್ತಾನಿ ಸಿಖ್ ವೈದ್ಯ ಹಾಗೂ ರಾಜಕಾರಣಿ ಸರ್ದಾರ್ ಸೂರನ್ ಸಿಂಗ್ ಅವರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಸರ್ದಾರ್ ಸೂರನ್ ಸಿಂಗ್ (ಪಿಟಿಐ ಚಿತ್ರ)
ಸರ್ದಾರ್ ಸೂರನ್ ಸಿಂಗ್ (ಪಿಟಿಐ ಚಿತ್ರ)
Updated on: 
ಪೇಶಾವರ: ಖ್ಯಾತ ಪಾಕಿಸ್ತಾನಿ ಸಿಖ್ ವೈದ್ಯ ಹಾಗೂ ರಾಜಕಾರಣಿ ಸರ್ದಾರ್ ಸೂರನ್ ಸಿಂಗ್ ಅವರನ್ನು ಶನಿವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮುಖ್ಯಮಂತ್ರಿ ಕೈಬರ್ ಪಖ್ತುಂಖ್ವಾ ಅವರ ವಿಶೇಷ ಸಹಾಯಕರು ಆಗಿದ್ದ ಸರ್ದಾರ ಸೂರನ್ ಸಿಂಗ್ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಬುನೆರ್ ಜಿಲ್ಲೆಯ ಪಿರ್ ಬಾಬಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ದಾರ್ ಸಿಂಗ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬುನೇರ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸರ್ದಾರ್ ಸಿಂಗ್ ಅವರು ವೃತ್ತಿಯಲ್ಲಿ ವೈದ್ಯರು, ಟಿವಿ ಆಂಕರ್ ಹಾಗೂ ರಾಜಕಾರಣಿಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com