ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶ ಬೇಡ: ಚೀನಾಕ್ಕೆ ಜಪಾನ್ ಎಚ್ಚರಿಕೆ

ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶಿಸುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಚೀನಾಕ್ಕೆ ಜಪಾನ್ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ವಿವಾದಿತ ಪೂರ್ವ ಚೀನಾ ಸಮುದ್ರ (ಸಂಗ್ರಹ ಚಿತ್ರ)
ವಿವಾದಿತ ಪೂರ್ವ ಚೀನಾ ಸಮುದ್ರ (ಸಂಗ್ರಹ ಚಿತ್ರ)

ಟೋಕಿಯೋ: ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶಿಸುವ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಚೀನಾಕ್ಕೆ ಜಪಾನ್ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

ಆಂತಾರಾಷ್ಟ್ರೀಯ ನ್ಯಾಯಾಲಯಜ ತೀರ್ಪಿನ ನಡುವೆಯೂ ಪೂರ್ವ ಚೀನಾ ಸಮುದ್ರದ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ಚೀನಾ ಸರ್ಕಾರಕ್ಕೆ ಜಪಾನ್ ಸರ್ಕಾರ ತಕ್ಕ ಉತ್ತರ  ನೀಡಿದ್ದು, ವಿವಾದಿತ ಸಮುದ್ರ ಪ್ರವೇಶ ಮಾಡುವ ದುಸ್ಸಾಹಸಕ್ಕೆ ಚೀನಾ ಕೈಹಾಕಬಾರದು ಎಂದು ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಜಪಾನ್ ಸರ್ಕಾರದ ಹಿರಿಯ ಸಂಪುಟ ಕಾರ್ಯದರ್ಶಿ  ಯೋಶಿಹಿದೆ ಸುಗಾ ಅವರು, ಜಪಾನ್ ಸರ್ಕಾರ ಶಾಂತಿಪ್ರಿಯ ದೇಶವಾಗಿದೆ. ನಾವು ತುಂಬಾ ವಿನಯವಾಗಿ ಚೀನಾವನ್ನು ಕೇಳಿಕೊಳ್ಳುತ್ತಿದ್ದು, ವಿವಾದಿತ ಪೂರ್ವ ಚೀನಾ ಸಮುದ್ರ ಪ್ರವೇಶ  ಮಾಡದಂತೆ ಮನವಿ ಮಾಡಿದ್ದಾರೆ.

"ಈ ವರೆಗೂ ಚೀನಾ ಸರ್ಕಾರದ ನಾವಿಕ ಪಡೆಗಳು ಸುಮಾರು 14 ಬಾರಿ ಜಪಾನ್ ಬಳಿ ವಿವಾದಿತ ಸಮುದ್ರ ಪ್ರವೇಶ ಮಾಡಿವೆ. ಚೀನಾ ಸರ್ಕಾರದ ನಡೆ ಕಾನೂನು ಬಾಹಿರಂಗವಾಗಿದ್ದು, ಶಿಕ್ಷಾರ್ಹ  ಅಪರಾಧವಾಗಿದೆ. ಹೀಗಾಗಿ ಸೌಹಾರ್ಧತೆಯ ದೃಷ್ಟಿಯಿಂದ ಚೀನಾ ಪೂರ್ವ ಚೀನಾ ಸಮುದ್ರದಲ್ಲಿ ತನ್ನ ನೌಕೆಗಳನ್ನು ಇಳಿಸಬಾರದು ಎಂದು ಹೇಳಿದ್ದಾರೆ. ಅಂತೆಯೇ ಕಳೆದ ಸೋಮವಾರವೂ  ಚೀನಾ ಸೇನಾಪಡೆಗೆ ಸೇರಿದ 12 ಹಡಗಗಳು ವಿವಾದಿತ ಸಮುದ್ರ ಪ್ರವೇಶಿಸಿದ್ದವು, ಈ ಬಗ್ಗೆ ಜಪಾನ್ ಕರಾವಳಿ ಸೇನಾಪಡೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಜಪಾನ್ ಸಮೀಪದ ಸೇನ್ ಕಕು ಮತ್ತು ಚೀನಾ ಸಮೀಪದ ಡಿಯಾಯೋ ದ್ವೀಪಗಳು ಉಭಯ ದೇಶಗಳ ನಡುವಿನ ಗಡಿ ಜಟಾಪಟಿಗೆ ಕಾರಣವಾಗಿದ್ದು, ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ  ನ್ಯಾಯಾಲಯ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾಗೆ ಪಾರಂಪರಿಕ ಹಕ್ಕಿಲ್ಲ ಎಂದು ಐತಿಹಾಸಿಕ ತೀರ್ಪು ನೀಡಿತ್ತು. ಇದಾಗ್ಯೂ ಚೀನಾ ಸೇನೆ ಮಾತ್ರ ಅಲ್ಲಿನ ತನ್ನ ಕಾರ್ಯ  ಚಟುವಟಿಕೆಗಳನ್ನು ಸ್ಥಗಿತಗೊಳಿಸರಿಲ್ಲಿಲ್ಲ. ಇದು ಅಮೆರಿಕ, ಭಾರತ ಮತ್ತು ಜಪಾನ್ ಸೇರಿದಂತೆ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com