ಫೇಸ್ ಬುಕ್ ನಲ್ಲಿ ಮಾನಹಾನಿ ಪೋಸ್ಟ್ ಮಾಡಿದ್ದಕ್ಕಾಗಿ $150,000 ದಂಡ!

ಫೇಸ್ ಬುಕ್ ನಲ್ಲಿ ಮಾನಹಾನಿ ಪೋಸ್ಟ್ ಬರೆದಿದ್ದಕ್ಕಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಜಿಲ್ಲಾ ನ್ಯಾಯಾಧೀಶರು ವ್ಯಕ್ತಿಯೋರ್ವನಿಗೆ 150,000 ಡಾಲರ್ ದಂಡ ವಿಧಿಸಿದ್ದಾರೆ.
ಫೇಸ್ ಬುಕ್ ( ಸಾಂದರ್ಭಿಕ ಚಿತ್ರ)
ಫೇಸ್ ಬುಕ್ ( ಸಾಂದರ್ಭಿಕ ಚಿತ್ರ)

ಸಿಡ್ನಿ: ಫೇಸ್ ಬುಕ್ ನಲ್ಲಿ ಮಾನಹಾನಿ ಪೋಸ್ಟ್ ಬರೆದಿದ್ದಕ್ಕಾಗಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ರಾಜ್ಯದ ಜಿಲ್ಲಾ ನ್ಯಾಯಾಧೀಶರು ವ್ಯಕ್ತಿಯೋರ್ವನಿಗೆ 150,000 ಡಾಲರ್ ದಂಡ ವಿಧಿಸಿದ್ದಾರೆ. 
2014 ರ ಮಾರ್ಚ್ ನಲ್ಲಿ ಎಲೆಕ್ಟ್ರಿಷಿಯನ್ ಡೇವಿಡ್ ಸ್ಕಾಟ್ ಹೋಟೆಲ್ ಒಂದರ ಬಗ್ಗೆ ಆಕ್ಷೇಪಾರ್ಹವಾದ ಪೋಸ್ಟ್ ನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ.  ಇದನ್ನು ಗಮನಿಸಿದ್ದ ಹೋಟೆಲ್ ಮಾಲೀಕ, ಶಾಲೆಯ ಮಾಜಿ ಪ್ರಾಂಶುಪಾಲರಾದ ಕೆನ್ನೆತ್ ರೊಟ್ ಕ್ಷಮೆಯಾಚಿಸುವಂತೆ ಕೇಳಿದ್ದರು. ಆದರೆ ಕ್ಷಮೆ ಯಾಚಿಸಲು ಒಪ್ಪದೇ ಹೋಟೆಲ್ ಮಾಲೀಕರಿಗೆ ಡೇವಿಡ್ ಸ್ಕಾಟ್ ಥಳಿಸಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಆಸ್ಟ್ರೇಲಿಯಾದ ನ್ಯಾಯಾಧೀಶರು ಡೇವಿಡ್ ಸ್ಕಾಟ್ ಗೆ 150,000 ಡಾಲರ್ ದಂಡ ಪಾವತಿ ಮಾಡುವಂತೆ ಆದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com