ಕಾಬುಲ್ ಅಮೆರಿಕ ರಾಯಭಾರಿ ಕಚೇರಿ ಬಳಿ ಸ್ಫೋಟ: 2 ಗಾಯ

ಅಫ್ಘಾನಿಸ್ತಾನದ ಕಾಬುಲ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸಮೀಪ ಬಾಂಬ್ ವೊಂದು ಸ್ಫೋಟಗೊಂಡಿದ್ದು, ಪರಿಣಾಮ ಇಬ್ಬರು ವ್ಯಕ್ತಿಗಳಿಗೆ ಗಾಯಗೊಂಡಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಾಬುಲ್: ಅಫ್ಘಾನಿಸ್ತಾನದ ಕಾಬುಲ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸಮೀಪ ಬಾಂಬ್ ವೊಂದು ಸ್ಫೋಟಗೊಂಡಿದ್ದು, ಪರಿಣಾಮ ಇಬ್ಬರು ವ್ಯಕ್ತಿಗಳಿಗೆ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ.

ಕಾಬುಲ್ ನ ಮ್ಯಾಕ್ರೋರಾಯನ್ ಪ್ರದೇಶದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಅಫ್ಘಾನಿಸ್ತಾನದ ರಾಷ್ಟ್ರದ ಭದ್ರತಾ ಸಿಬ್ಬಂದಿಗಳ ವಾಹನಕ್ಕೆ ಅಯಸ್ಕಾಂತೀಯ ಬಾಂಬ್ ನ್ನು ಅಳವಡಿಸಿರುವ ಉಗ್ರರು, ಈ ಮೂಲಕ ತಮ್ಮ ದುಷ್ಕೃತ್ಯವೆಸಗಿದ್ದಾರೆಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಗರೀಕರನ್ನೇ ಗುರಿಯಾಗಿಸಿಕೊಂಡು ಉಗ್ರರು ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಉಗ್ರರು ಸೇನಾ ವಾಹನಕ್ಕೆ ಬಾಂಬ್ ಅಳವಡಿಸಿದ್ದಾರೆಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಸಾವು ಕುರಿತಂತೆ ಈ ವರೆಗೂ ಯಾವುದೇ ವರದಿಗಳಾಗಿಲ್ಲ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com