ಭಾರತಕ್ಕೆ ಬುದ್ದಿ ಕಲಿಸಲು ಸೇನಾಪಡೆಯನ್ನು ಕಾಶ್ಮೀರಕ್ಕೆ ಕಳುಹಿಸಿ: ಪಾಕಿಸ್ತಾನಕ್ಕೆ ಹಫೀಜ್ ಸಯ್ಯೀದ್ ಆಗ್ರಹ

ಭಾರತಕ್ಕೆ ಬುದ್ದಿ ಕಲಿಸಲು ಕಾಶ್ಮೀರಕ್ಕೆ ಪಾಕ್ ಸೇನೆ ಕಳುಹಿಸುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಾಹೀಲ್ ಷರೀಫ್ ಅವರನ್ನು ಕೇಳಿದ್ದಾನೆ..
ಹಫೀಜ್ ಸಯೀದ್
ಹಫೀಜ್ ಸಯೀದ್

ಇಸ್ಲಮಾಬಾದ್: ಹಿಜ್ಬುಲ್ ಮುಜಾಹಿದ್ದೀನ್ ಮುಖಂಡ ಬುರ್ಹಾನ್ ವನಿ ಹತ್ಯೆ ಸಂಬಂಧ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಆಕ್ರೋಶದ ಬೆಂಕಿಗೆ ಜಮಾತ್ ಉಲ್ ದವಾ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಮತ್ತಷ್ಟು ತುಪ್ಪ ಸುರಿದಿದ್ದಾನೆ.

ಪಾಕಿಸ್ತಾನದ ಮಾಧ್ಯಮದ ವರದಿ ಪ್ರಕಾರ ಹಫೀಜ್ ಸಯೀದ್  ಭಾರತಕ್ಕೆ ಬುದ್ದಿ ಕಲಿಸಲು ಕಾಶ್ಮೀರಕ್ಕೆ ಪಾಕ್ ಸೇನೆ ಕಳುಹಿಸುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಾಹೀಲ್ ಷರೀಫ್ ಅವರನ್ನು ಕೇಳಿದ್ದಾನೆ ಎಂದು ಹೇಳಲಾಗಿದೆ.

ಕಾಶ್ಮೀರದಲ್ಲಿ ಭಾರತದ ಕಡೆಯಿಂದ ನಡೆಯುತ್ತಿರುವ ಯಾವುದೇ ಪ್ರತಿಭಟನೆಯಿಂದ ಯಾವುದೇ ತೀವ್ರತರವಾದ ಪರಿಣಾಮಗಳುಂಟಾಗುವುದಿಲ್ಲ ಎಂದು ಕಳೆದ ತಿಂಗಳು ಹಪೀಜ್ ಸಯ್ಯೀದ್ ಹೇಳಿದ್ದ.

ಲಾಹೋರ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಹಫೀಜ್, ಕಾಶ್ಮೀರದ ಜನ ಈ ಬಾರಿ ರಸ್ತೆಗಿಳಿದಿದ್ದಾರೆ. ಪ್ರತಿಭಟನೆ ಸಾಮೂಹಿಕ ಚಳುವಳಿಯಾಗುತ್ತಿದೆ. ಕಾಶ್ಮೀರದಲ್ಲಿರುವ ಎಲ್ಲಾ ಸಂಘಟನೆಗಳು ಒಂದಾಗಿವೆ, ಹುರಿಯತ್ ನ ಎಲ್ಲಾ ಘಟಕಗಳು ಒಗ್ಗೂಡಿವೆ. ಮುತಾಹಿದಾ ಜಿಹಾದ್ ಕೌನ್ಸಿಲ್ ಮತ್ತು ಇತರ ಗುಂಪುಗಳೆಲ್ಲಾ ಒಂದೇ ವೇದಿಕೆಯಡಿ ಒಗ್ಗೂಡಿ ಹೋರಾಟ ನಡೆಸುತ್ತಿದ್ದು, ಕಾಶ್ಮೀರದಲ್ಲಿ ಬೀಳುತ್ತಿರುವ ಹೆಣಗಳು ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಹೇಳಿದ್ದಾನೆ.

ವನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಉಂಟಾದ ಹಿಂಸಾಚಾರದಲ್ಲಿ ಇದುವರೆಗೂ ಸುಮಾರು 58 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ಸಾರ್ವಜನಿಕರು ಹಾಗೂ ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ತನ್ನ ಜೊತೆ ಚರ್ಚೆ ನಡೆಸಿದ ನಂತರ ತಾನು ಸಾಯಲು ಸಿದ್ದನಾಗಿರುವುದ್ದಾಗಿ ಹೇಳಿದ್ದ ಎಂದು ಸಯ್ಯೀದ್ ತಿಳಿಸಿದ್ದಾನೆ.

ದುಕ್ತಾಹರನ್ -ಇ-ಮಿಲ್ಲೆಟ್ ಸಂಘಟನೆಯ ಮುಖ್ಯಸ್ಥ ಏಷ್ಯಾ ಅಂದ್ರಾಬಿ ಕಡೆಯಿಂದ ದೂರವಾಣಿ ಕರೆ ಬಂದಿದ್ದು, ಕಾಶ್ಮೀರ ಸಮಸ್ಯೆಯನ್ನು ಬಗೆ ಹರಿಸಲು ಸಹಾಯ ನೀಡುವುದಾಗಿ ಹೇಳಿದ್ದಾನೆಂದು ಸಯ್ಯೀದ್ ತಿಳಿಸಿದ್ದಾನೆ.

ಹುರಿಯತ್ ಪ್ರತ್ಯೇಕತಾವಾದಿ ಮುಖ್ಯಸ್ಥ ಸೈಯ್ಯದ್ ಅಲಿ ಶಾ ಗಿಲಾನಿಯ ನಾಲ್ಕು ಅಂಶಗಳ ಒಪ್ಪಂದವನ್ನು ಒಪ್ಪಿಕೊಂಡು ಕಾಶ್ಮೀರದಿಂದ ಭಾರತ ತನ್ನ ಸೈನ್ಯವನ್ನು ವಾಪಸ್ ಕರೆಸಿಕೊಳ್ಳಬೇಕು ಇಲ್ಲವೇ ಯುದ್ಧವನ್ನು ಎದುರಿಸಬೇಕು ಎಂದು ಭಾರತಕ್ಕೆ ಸಯ್ಯೀದ್ ಎಚ್ಚರಿಕೆ ನೀಡಿದ್ದಾನೆ.

ಮುಂದಿನ ದಿನಗಳಲ್ಲಿ ಲಾಹೋರ್ ನಿಂದ ಇಸ್ಲಾಮಾಬಾದ್ ವರೆಗೂ ಕಾಶ್ಮೀರ್ ಕರವಣ್ ಎಂಬ ರ್ಯಾಲಿ ಹಮ್ಮಿಕೊಳ್ಳುವುದಾಗಿ ಸಯೀದ್ ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com