ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಕುತಂತ್ರಿ: ಡೊನಾಲ್ಡ್ ಟ್ರಂಪ್

ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಅಪಮೌಲ್ಯ ಮಾಡುವ ದೊಡ್ಡ ಕುತಂತ್ರಿ ದೇಶವೆಂದು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್...
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಚೀನಾ ಕೆಟ್ಟ ದುರುಪಯೋಗಿ ಹಾಗೂ ಕರೆನ್ಸಿ ಅಪಮೌಲ್ಯ ಮಾಡುವ ದೊಡ್ಡ ಕುತಂತ್ರಿ ದೇಶವೆಂದು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಟಂಪಾ ಫ್ಲೋರಿಡಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿರುವ ಅವರು, ಚೀನಾ ಕೆಟ್ಟ ದುರಪಯೋಗಿ ಹಾಗೂ ಕರೆನ್ಸಿ ಅಪಮೌಲ್ಯ ಮಾಡುವ ದೊಡ್ಡ ಕುತಂತ್ರಿ ದೇಶವಾಗಿದ್ದು, ಒಂದು ವೇಳೆ ನಾನು ಅಧಿಕಾರಕ್ಕೆ ಬಂದಿದ್ದೇ ಆದರೆ, ವ್ಯಾಪಾರ ಒಪ್ಪಂದ ಉಲ್ಲಂಘಿಸುವ ದೇಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆಂದು ಹೇಳಿದ್ದಾರೆ.

ಚೀನಾಗೆ ನಮ್ಮ ದೇಶದ ಮೇಲೆ ಯಾವುದೇ ರೀತಿಯ ಗೌರವವಿಲ್ಲ. ನಮ್ಮ ನಾಯಕತ್ವದ ಮೇಲೆ ಅವರಿಗೆ ಗೌರವವಿಲ್ಲ. ಹಾಗೆಂದು ಅವರನ್ನು ನಾವು ದೂಷಿಸುವುದಿಲ್ಲ. ಶೀಘ್ರದಲ್ಲಿ ನಾವು ಉತ್ತಮ ಸ್ಥಾನ ಏರಲಿದ್ದೇವೆ. ಇದೀಗ ನಮ್ಮನ್ನು ತೆಗಳುತ್ತಿರುವ ಅವರು ಮುಂದೆ ನಮ್ಮನ್ನು ಇಷ್ಟಪಡುತ್ತಾರೆ.

ಚೀನಾ ಅಮೆರಿಕಾ ರಾಷ್ಟ್ರವನ್ನು ಇಷ್ಟಪಡುವುದಿಲ್ಲ. ಹೀಗಾಗಿ ದಕ್ಷಿಣ ಚೀನಾ ಸಮುದ್ರದ ಮಧ್ಯದಲ್ಲಿ ಅವರು ಸೇನಾ ಕೋಟೆಯನ್ನು ನಿರ್ಮಿಸುತ್ತಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿ ನಮಗೆ ಹೊಡೆತ ನೀಡಲು ಯತ್ನಿಸುತ್ತಿದ್ದಾರೆ. ಚೀನಾಗೆ ಹೋಲಿಕೆ ಮಾಡಿದರೆ ನಮ್ಮಲ್ಲಿರುವ ಆರ್ಥಿಕತೆ ಅತ್ಯಂತ ಶಕ್ತಿಶಾಲಿಯಾಗಿದೆ.

ದೇಶದಲ್ಲಿ ಇದೀಗ ಏನಾಗುತ್ತಿದೆ ಎಂಬುದು ನಮ್ಮ ರಾಜಕೀಯ ನಾಯಕರಿಗೆ ಗೊತ್ತಿದೆ ಎಂದು ನನಗೆ ಅನಿಸುತ್ತಿಲ್ಲ. ವ್ಯಾಪಾರ ಒಪ್ಪಂದ ಉಲ್ಲಘಿಸುತ್ತಿರುವ ಚೀನಾ ದೇಶದ ಮೇಲೆ ಪ್ರಕರಣ ದಾಖಲಿಸುವಂತೆ ದೇಶಕ್ಕೆ ಮನವಿ ಮಾಡುತ್ತಿದ್ದೇನೆ.

ಚೀನಾ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸುತ್ತಿದೆ. ಈ ಕ್ರಮ ತೀರಾ ಕೆಟ್ಟದ್ದು. ಅಮೆರಿಕಾವನ್ನು ದುರುಯೋಗವಾಗಿ ಬಳಸಿಕೊಳ್ಳುತ್ತಿದೆ. ಸಬ್ಸಿಡಿಯಲ್ಲಿ ಅನ್ಯಾಯ ಮಾಡುತ್ತಿದ್ದು, ಚೀನಾ ನಡವಳಿಕೆ ವಿಶ್ವ ವ್ಯಾಪಾರ ಸಂಸ್ಥೆಗೆ ವಿರುದ್ಧವಾದದ್ದಾಗಿದೆ. ಹೀಗಾಗಿ ನಿಯಮ ಉಲ್ಲಂಘಿಸುತ್ತಿರುವ ಚೀನಾ ಮೇಲೆ ನಿಯಮಗಳಗಳನ್ನು ಹೇರಿ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ.

ತಮ್ಮ ಮೇಲೆ ಅಮೆರಿಕಾ ದೇಶ ಕ್ರಮಕೈಗೊಳ್ಳಲಿದೆ ಎಂಬ ಸತ್ಯಾಂಶ ಚೀನಾಗೆ ಗೊತ್ತಿದೆ. ಆದರೂ, ನಾವು ಏನು ಮಾಡುತ್ತೇವೆ? ಎಂದು ಹೇಳುತ್ತಿದೆ. ಒಂದು ವೇಳೆ ಚೀನಾ ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿದ್ದೇ ಆದಲ್ಲಿ, ಚೀನಾ ವಿರುದ್ಧ ಅಮೆರಿಕಾ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com