ಅಪಘಾತ; ಖ್ಯಾತ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅಪಾಯದಿಂದ ಪಾರು

ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಹಾಗೂ ವರ್ಜಿನ್ ಏರ್ ವೇಸ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಬ್ರಾನ್ಸನ್ (ವರ್ಜಿನ್.ಕಾಮ್ ಚಿತ್ರ)
ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಬ್ರಾನ್ಸನ್ (ವರ್ಜಿನ್.ಕಾಮ್ ಚಿತ್ರ)

ಕಿಂಗ್ ಸ್ಟನ್: ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ ಹಾಗೂ ವರ್ಜಿನ್ ಏರ್ ವೇಸ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೌಟುಂಬಿಕ ಕಾರ್ಯಕ್ರಮ ನಿಮಿತ್ತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ರಿಚರ್ಡ್ ಬ್ರಾನ್ಸನ್ ತಮ್ಮ ಮಕ್ಕಳೊಂದಿಗೆ ಸೈಕ್ಲಿಂಗ್ ತೆರಳಿದ್ದು, ಈ ವೇಳೆ ವರ್ಜಿನ್ ಗೋರ್ಡಾ ದ್ವೀಪದಲ್ಲಿ ಸೈಕಲ್  ಚಾಲನೆ ಮಾಡುತ್ತಿದ್ದಾಗ ಬ್ರಾನ್ಸನ್ ಆಯತಪ್ಪಿ ಪ್ರಪಾತಕ್ಕೆ ಬಿದ್ದಿದ್ದಾರೆ. ಮೂಲಗಳ ಪ್ರಕಾರ ಬ್ರಾನ್ಸನ್ ತಮ್ಮ ಮಕ್ಕಳಾದ ಹೋಲಿ ಹಾಗೂ ಸ್ಯಾಮ್ ರೊಂದಿಗೆ ವರ್ಜಿನ್ ಗೋರ್ಡಾ ದ್ವೀಪಕ್ಕೆ  ಸೈಕ್ಲಿಂಗ್ ತೆರಳಿದ್ದು, ಈ ವೇಳೆ ರಸ್ತೆ ಉಬ್ಬಿಗೆ ಡಿಕ್ಕಿ ಹೊಡೆದ ಬ್ರಾನ್ಸನ್ ನೋಡ ನೋಡುತ್ತಿದ್ದಂತೆಯೇ ಪ್ರಪಾತಕ್ಕೆ ಬಿದ್ದಿದ್ದಾರೆ.

ಈ ವೇಳೆ ಪ್ರಪಾತದ ಕೆಳಗೆ ಇದ್ದ ರಸ್ತೆ ಮೇಲೆ ಬ್ರಾನ್ಸನ್ ಬಿದ್ದಿದ್ದು, ಅವರ ಮುಖ, ಬುಜ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಪೆಟ್ಟುಗಳಾಗಿವೆ. ಸೈಕ್ಲಿಂಗ್ ವೇಳೆ ಬ್ರಾನ್ಸನ್ ತಲೆಗೆ ಹಲ್ಮೆಟ್  ಧರಿಸಿದ್ದರಿಂದ ಅವರ ತಲೆಗೆ ಬೀಳಬೇಕಿದ್ದ ಪೆಟ್ಟು ಹೆಲ್ಮೆಟ್ ಗೆ ಬಿದ್ದಿದೆ. ಹೀಗಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಸ್ವತಃ ಬ್ರಾನ್ಸನ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದು, "ನಾನು ಸತ್ತೇ ಹೋಗುತ್ತೇನೆ ಎಂದು ತಿಳಿದಿದ್ದೆ. ಸೈಕ್ಲಿಂಗ್ ವೇಳೆ ಪ್ರಪಾತಕ್ಕ ಬಿದ್ದಾಗ ನನ್ನ ಇಡೀ ಜೀವನ  ಒಂದು ಕ್ಷಣ ನನ್ನ ಕಣ್ಣ ಮುಂದೆ ಬಂತು. ಪ್ರಪಾತಕ್ಕೆ ಬಿದ್ದಾಗ ನನ್ನ ಸೈಕಲ್ ಕೂಡ ಕಾಣದಹಾಗೆ ಮಾಯವಾಯಿತು. ಅದೃಷ್ಟವಶಾತ್ ನಾನು ಬದುಕುಳಿದಿದ್ದೇನೆ. ನನ್ನ ಕುತ್ತಿಗೆ, ಗಡ್ಡ ಹಾಗೂ  ಬುಜದಲ್ಲಿ ಗಂಭೀರಗಾಯಗಳಾಗಿವೆ ಎಂದು ಬ್ರಾನ್ಸನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com