ಭಾರತ-ಅಮೆರಿಕ ರಕ್ಷಣಾ ಒಪ್ಪಂದ ಒಂದು 'ಸಾಧಾರಣ ಸಹಕಾರ' ಎಂದ ಚೀನಾ

ಭಾರತ- ಅಮೆರಿಕ ರಕ್ಷಣಾ ಪರಿಕರ ವಿನಿಮಯ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದೊಂದು ಸಾಧಾರಣ ಎಂದು ಹೇಳಿದೆ.
ಮನೋಹರ್ ಪರಿಕ್ಕರ್ ಹಾಗೂ ಆ್ಯಷ್ಟನ್ ಕಾರ್ಟರ್
ಮನೋಹರ್ ಪರಿಕ್ಕರ್ ಹಾಗೂ ಆ್ಯಷ್ಟನ್ ಕಾರ್ಟರ್

ಬೀಜಿಂಗ್: ಭಾರತ- ಅಮೆರಿಕ ರಕ್ಷಣಾ ಪರಿಕರ ವಿನಿಮಯ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದೊಂದು ಸಾಧಾರಣ ಎಂದು ಹೇಳಿದೆ.

ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ಭಾರತ- ಅಮೆರಿಕ ನಡುವಿನ ರಕ್ಷಣಾ ಪರಿಕರ ವಿನಿಮಯ ಒಪ್ಪಂದ ಚೀನಾ, ಪಾಕಿಸ್ತಾನ ಹಾಗೂ ರಷ್ಯಾ ದೇಶಗಳಿಗೆ ಕಿರಿಕಿರಿ ಉಂಟು ಮಾಡಲಿದೆ, ತತ್ಪರಿಣಾಮವಾಗಿ ಭಾರತ ರಾಜತಾಂತ್ರಿಕ ಸಮಸ್ಯೆಗಳನ್ನು ಮೇಲೆಳೆದುಕೊಳ್ಳುತ್ತಿದೆ ಎಂದು ಎಚ್ಚಹರಿಸಿತ್ತು. ಆದರೂ ಸಹ ಚೀನಾ ಈ ಒಪ್ಪಂದವನ್ನು ಸಾಧಾರಣ ಒಪ್ಪಂದ ಎಂದು ಹೇಳಿದೆ.

ಭಾರತ- ಅಮೆರಿಕ ನಡುವಿನ ಒಪ್ಪಂದದಿಂದ ಪ್ರಾದೇಶಿಕ ಸ್ಥಿರತೆ ಹಾಗೂ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಸಾಧಾರಣ ಸಹಕಾರ ಒಪ್ಪಂದಗಳನ್ನು ಚೀನಾ ಸ್ವಾಗತಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಆದರೆ ಚೀನಾದ ಸರ್ಕಾರಿ ಸ್ವಾಮ್ಯದ ಮಾಧ್ಯಮವಾಗಿರುವ ಗ್ಲೋಬಲ್ ಟೈಮ್ಸ್, ಭಾರತ- ಅಮೆರಿಕದ ನಡುವಿನ ಒಪ್ಪಂದದ ಬಗ್ಗೆ ಲೇಖನ ಪ್ರಕಟಿಸಿ, ಈ ಒಪ್ಪಂದದಿಂದ ಭಾರತ ತನ್ನಕಾರ್ಯತಂತ್ರದ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳಲಿದೆ ಎಂದು, ಅಷ್ಟೇ ಅಲ್ಲದೆ ಇದಕ್ಕೆ ಯುದ್ಧದ ಒಪ್ಪಂದ ಎಂದೇ ಬಣ್ಣಿಸಿದ್ದ ಫೋರ್ಬ್ಸ್ ನ ವರದಿಯನ್ನು ಪೂರಕವಾಗಿ ಉಲ್ಲೇಖಿಸಿ ಒಪ್ಪಂದದಿಂದ  ಚೀನಾ, ಪಾಕಿಸ್ತಾನ ಹಾಗೂ ರಷ್ಯಾ ದೇಶಗಳಿಗೆ ಕಿರಿಕಿರಿ ಉಂಟಾಗಲಿದೆ ಎಂದು ಹೇಳಿತ್ತು. ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ಬಲೂಚಿಸ್ಥಾನದ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ ಬಗ್ಗೆ ಉಲ್ಲೇಖ ಮಾಡಿರುವ ಗ್ಲೋಬಲ್ ಟೈಮ್ಸ್, ಕಾಶ್ಮೀರದಲ್ಲಿ ಉಂಟಾಗಿರುವ ಸ್ಥಿತಿಯನ್ನು ಮುಚ್ಚಿಡಲು ಮೋದಿ ಬಲೂಚಿಸ್ಥಾನ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com