ಆಕಸ್ಮಿಕ ಲಾಟರಿ ಮಾರಾಟ: ಖರೀದಿಸಿದ್ದ ದಂಪತಿಗೆ 1 ಮಿಲಿಯನ್ ಡಾಲರ್ ಬಹುಮಾನ

ಆಕಸ್ಮಿಕವಾಗಿ ಮಾರಾಟ ಮಾಡಿದ ಲಾಟರಿ ಟಿಕೆಟ್ ಖರೀದಿಸಿದ ದಂಪತಿ 1 ಮಿಲಿಯನ್ ಹಣ ಸಂಪಾದಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲೇಕ್ ವುಡ್: ಆಕಸ್ಮಿಕವಾಗಿ ಮಾರಾಟ ಮಾಡಿದ ಲಾಟರಿ ಟಿಕೆಟ್ ಖರೀದಿಸಿದ ದಂಪತಿ 1 ಮಿಲಿಯನ್ ಹಣ ಸಂಪಾದಿಸಿದ್ದಾರೆ.

ನ್ಯೂ ಜೆರ್ಸಿಯ 70 ವರ್ಷದ ದೇಂಟ್ ಕ್ಯಾಸ್ಟಿಲ್ಲೋ ಯಾವಾಗಲು ತಮಗೆ ಬೇಕಾದ ಸಂಖ್ಯೆಯ ಲಾಟರಿ ಖರೀದಿಸುತ್ತಿದ್ದರು. ಆದರೆ ಲೇಕ್ ವುಡ್ ನ ಬಟ್ಟೆ ವ್ಯಾಪಾರಿಯೊಬ್ಬ ಗುರುವಾರದ ಕ್ಯಾಶ್ 4 ಲೈಫ್ ಜಾಕ್ ಪಾಟ್ ನ ಕೆಲವು ಟಿಕೆಟ್ ಗಳನ್ನು ತಂದಿದ್ದ. ಕಂಪ್ಯೂಟರ್ ಆಧಾರಿತ ಸಂಖ್ಯೆಗಳಿದ್ದ ಲಾಟರಿಗಳನ್ನು ಡೇಂಟ್ ಕ್ಯಾಸ್ಟಿಲ್ಲೋಗೆ ಮಾರಾಟ ಮಾಡಿದ್ದ.

ಕ್ಯಾಸ್ಟಿಲ್ಲೋ ಖರೀದಿಸಿದ್ದ ಲಾಟರಿ ಸಂಖ್ಯೆಗೆ 1 ಮಿಲಿಯನ್ ಡಾಲರ್ ಹಣ ಬಹುಮಾನ ಬಂದಿದೆ. ಕ್ಯಾಸ್ಟಿಲ್ಲೋ ಮತ್ತು ಆತನ ಪತ್ನಿ 1 ಮಿಲಿಯನ್ ಡಾಲರ್ ಹಣದ ಬಹುಮಾನ ಗೆದ್ದಿದ್ದಾರೆ. ಒಂದೇ ಬಾರಿ ಹಣ ಪಡೆಯುವುದು ಅಥವಾ  ಜೀವಮಾನ ಪೂರ್ತಿ ಪ್ರತಿ ವಾರ 1 ಸಾವಿರ ಹಣ ಪಡೆಯುವ ಅವಕಾಶ ಪಡೆದಿದ್ದಾರೆ.  ಟಿಕೆಟ್ ಮಾರಿದ್ದಕ್ಕೆ ಹಾಗೂ ಅದೇ ಟಿಕೆಟ್ ಗೆ ಬಹುಮಾನ ಬಂದ ಹಿನ್ನೆಲೆಯಲ್ಲಿ ಮಾರಾಟದ ಅಂಗಡಿ 10 ಸಾವಿರ ಡಾಲರ್ ಬೋನಸ್ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com