ಕ್ಯಾನ್ಬೆರಾ: ರಾಣಿಯ ಆಳ್ವಿಕೆ ಅಂತ್ಯಗೊಂಡ ಬಳಿಕವಷ್ಟೇ ಆಸ್ಟ್ರೇಲಿಯಾ ಗಣರಾಜ್ಯವಾಗುವುದಕ್ಕೆ ಸಾಧ್ಯ ಎಂದು ಆಸ್ಟ್ರೇಲಿಯಾದ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ಹೇಳಿದ್ದಾರೆ.
ಆಸ್ಟ್ರೇಲಿಯಾದ ಗಣರಾಜ್ಯ ಚಳುವಳಿ (ಎಆರ್ ಎಂ)ಯ 25 ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್, ರಾಣಿ ಎಲಿಜಾಬೆತ್ II ಆಳ್ವಿಕೆ ಅಂತ್ಯವಾದ ನಂತರವಷ್ಟೇ ದೇಶ ಗಣರಾಜ್ಯವಾಗುವುದಕ್ಕೆ ಸಾಧ್ಯ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಗಣರಾಜ್ಯವಾಗಲಿದೆ ಎಂದು ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ವಿಶ್ವಾಸವ್ಯಕ್ತಪಡಿಸಿದ್ದಾರೆ. 1993, 1999 ಅವಧಿಯಲ್ಲಿ ಆಸ್ಟ್ರೇಲಿಯಾದ ಗಣರಾಜ್ಯ ಚಳುವಳಿಯ ನೇತೃತ್ವ ವಹಿಸಿದ್ದರು. ರಾಣಿ ಎಲಿಜಾಬೆತ್ II ಅವಧಿಯಲ್ಲಿ ಆಸ್ಟ್ರೇಲಿಯಾ ಗಣರಾಜ್ಯವಾಗಲಿದೆ ಎಂದು ಟರ್ನ್‌ಬುಲ್ ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ ನಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾವನ್ನು ಗಣತಂತ್ರ ದೇಶ ಎಂದು ಘೋಷಿಸುವುದಕ್ಕೆ ಬೆಂಬಲ ದೊರೆತಿದೆ ಎಂದು ಎಆರ್ ಎಂ ನ ಮುಖ್ಯಸ್ಥ ಪೀಟರ್ ಫಿಟ್ಜ್ಸಿಮೊನ್ಸ್ ಹೇಳಿದ್ದರು ಈ ಬೆನ್ನಲ್ಲೇ ಪ್ರಧಾನಿ ಮ್ಯಾಕ್ಲಂ ಟರ್ನ್‌ಬುಲ್ ಹೇಳಿಕೆ ನೀಡಿದ್ದಾರೆ.