ಟರ್ಕಿಯಲ್ಲಿ ರಷ್ಯಾ ರಾಯಭಾರಿ ಹತ್ಯೆಯನ್ನು ಖಂಡಿಸಿದ ಭಾರತ

ಟರ್ಕಿ ರಾಜಧಾನಿ ಅಂಕಾರಾದಲ್ಲಿ ರಷ್ಯಾ ರಾಯಭಾರಿಯ ಹತ್ಯೆಯನ್ನು ಭಾರತ ಸರ್ಕಾರ ಖಂಡಿಸಿದ್ದು, ಭಯೋತ್ಪಾದನೆ, ಹಿಂಸಾಚಾರಕ್ಕೆ ಸಮರ್ಥನೆ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ.
ಟರ್ಕಿಯಲ್ಲಿ ರಷ್ಯಾ ರಾಯಭಾರಿ ಹತ್ಯೆಯನ್ನು ಖಂಡಿಸಿದ ಭಾರತ
ಟರ್ಕಿಯಲ್ಲಿ ರಷ್ಯಾ ರಾಯಭಾರಿ ಹತ್ಯೆಯನ್ನು ಖಂಡಿಸಿದ ಭಾರತ
ನವದೆಹಲಿ: ಟರ್ಕಿ ರಾಜಧಾನಿ ಅಂಕಾರಾದಲ್ಲಿ ರಷ್ಯಾ ರಾಯಭಾರಿಯ ಹತ್ಯೆಯನ್ನು ಭಾರತ ಸರ್ಕಾರ ಖಂಡಿಸಿದ್ದು, ಭಯೋತ್ಪಾದನೆ, ಹಿಂಸಾಚಾರಕ್ಕೆ ಸಮರ್ಥನೆ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದೆ. 
ರಾಯಭಾರಿ ಹತ್ಯೆ ಕುರಿತು ಭಾರತದ ವಿದೇಶಾಂಗ ಇಲಾಖೆ ಪ್ರತಿಕ್ರಿಯೆ ನೀಡಿದ್ದು, ಘಟನೆಯಿಂದ ತೀವ್ರ ನೋವು, ಅಘಾತ ಉಂಟಾಗಿದೆ. ಭಾರತ ಸರ್ಕಾರ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತದೆ ಎಂದು ಹೇಳಿದೆ. ಅಂಕಾರಾದ ಕಲಾ ಗ್ಯಾಲರಿಯಲ್ಲಿ ಅಂಡ್ರ್ಯೂ ಕರ್ಲೋವ್ ಅವ್ ಅವರು ಭಾಷಣ ಮಾಡುತ್ತ ವೇಳೆ  ಅವರ ಅಂಗರಕ್ಷನೇ ಗುಂಡಿಟ್ಟು ಹತ್ಯೆ ಮಾಡಿದ್ದ. ಈ ಘಟನೆ ಬಗ್ಗೆ ರಷ್ಯಾ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಭಯೋತ್ಪಾದಕ ದಾಳಿ ಎಂದು ಹೇಳಿದೆ. 
ರಾಯಭಾರಿಯನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು, ಭಯೋತ್ಪಾದನೆಯನ್ನು ಉಳಿಯಲು ಬಿಡುವುದಿಲ್ಲ ಎಂದು ರಷ್ಯಾ ಟರ್ಕಿಗೆ ಎಚ್ಚರಿಕೆ ನೀಡಿದೆ. ಕರ್ಲೋವ್ ಅವರ ಮೇಲೆ ದಾಳಿ ಮಾಡಿದ ನಂತರ ಅಂಗರಕ್ಷಕನಾಗಿದ್ದ ವ್ಯಕ್ತಿ ಅಲ್ಲಾಹು ಅಕ್ಬರ್ ಎಂದು ಹೇಳಿದ್ದಾನೆ. ಗುಂಡು ಹಾರಿ ಕೆಳಗೆ ಬಿದ್ದ ಕರ್ಲೋವ್ ಅವರು, ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ ಎಂದು ಕೂಗಿದ್ದಾರೆ.
ದಾಳಿಕೋರರಿಗೆ ಶಿಕ್ಷೆ ಖಚಿತವಾಗಿದ್ದು, ಭಯೋತ್ಪಾದನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ. ಕರ್ಲೋವ್ ಅವರು ನಮ್ಮ ಹೃದಯದಲ್ಲಿ ಎಂದಿಗೂ ಇರುತ್ತಾರೆಂದು ರಷ್ಯಾ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com