ಮಿಶೆಲ್ ಒಬಾಮರನ್ನು "ಹೀಲ್ಸ್ ಧರಿಸಿರುವ ಕೋತಿ" ಎಂದ ಸರ್ಕಾರಿ ಉದ್ಯೋಗಿಯ ಎತ್ತಂಗಡಿ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮಾರನ್ನು "ಹೀಲ್ಸ್ ಧರಿಸಿರುವ ಕೋತಿ" ಎಂದು ಟೀಕಿಸಿದ್ದ ಅಮೆರಿಕದ ಸರ್ಕಾರಿ ಉದ್ಯೋಗಿಯನ್ನು ಎತ್ತಂಗಡಿ ಮಾಡಲಾಗಿದೆ.
ವಜಾಗೊಂಡ ಸರ್ಕಾರಿ ಉದ್ಯೋಗಿ ಪಮೇಲಾ ಟೇಲರ್ (ಫೇಸ್ ಬುಕ್ ಚಿತ್ರ)
ವಜಾಗೊಂಡ ಸರ್ಕಾರಿ ಉದ್ಯೋಗಿ ಪಮೇಲಾ ಟೇಲರ್ (ಫೇಸ್ ಬುಕ್ ಚಿತ್ರ)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮಿಶೆಲ್ ಒಬಾಮಾರನ್ನು "ಹೀಲ್ಸ್ ಧರಿಸಿರುವ ಕೋತಿ" ಎಂದು ಟೀಕಿಸಿದ್ದ ಅಮೆರಿಕದ ಸರ್ಕಾರಿ ಉದ್ಯೋಗಿಯನ್ನು ಕೆಲಸದಿಂದ ಎತ್ತಂಗಡಿ ಮಾಡಲಾಗಿದೆ.

ದೇಶದ ಪ್ರಥಮ ಮಹಿಳೆಯ ವಿರುದ್ಧ ಅಗೌರವ ಹೇಳಿಕೆ ಹಾಗೂ ಅವರ ಗೌರವಕ್ಕೆ ಚ್ಯುತಿ ತಂದ ಆರೋಪದ ಮೇರೆಗೆ ಪಶ್ಚಿಮ ವರ್ಜೀನಿಯಾದ ಪಟ್ಟಣದ ಕ್ಲೇ ಕೌಂಟಿ ಡೆವಲಪ್ ಮೆಂಟ್ ಕಾರ್ಪೋರೇಷನ್ ನ  ನಿರ್ದೇಶಕಿ ಪಮೇಲ್ ಟೈಲರ್ ರನ್ನು ವಜಾಗೊಳಿಸಲಾಗಿದೆ.

ಪಮೇಲಾ ಟೇಲರ್ ಅವರ ವಿವಾದಾತ್ಮಕ ಪೋಸ್ಟ್ ಬಳಿಕ  ಹೇಳಿಕೆ ಕ್ಲೇ ಕೌಂಟಿ ಡೆವಲಪ್ ಮೆಂಟ್ ಕಾರ್ಪೋರೇಷನ್ ನ ಕಾರ್ಯಗಳಲ್ಲಿ ವ್ಯಾಪಕ ಲೋಪದೋಷಗಳು ಕಂಡುಬಂದಿತ್ತು. ಸರ್ಕಾರಿ ಆದೇಶಗಳ ಪಾಲನೆಯಲ್ಲಿ ವಿಳಂಬ ಧೋರಣೆಯಂತಹ ಲೋಪಗಳು ಕಂಡುಬಂದಿದ್ದವು. ಅಂತೆಯೇ ಪಮೇಲಾ ಅವರನ್ನು ವಜಾಗೊಳಿಸುವಂತೆ ಆನ್ ಲೈನ್ ಅರ್ಜಿ ಕೂಡ ದಾಖಲಾಗಿ ಸುಮಾರು 2 ಲಕ್ಷಕ್ಕೂ ಅಧಿಕ ಸಹಿಗಳು ಸಂಗ್ರಹವಾಗಿತ್ತು.

ಇನ್ನು ಪಮೇಲಾ ಟೇಲರ್ ಅವರ ವಜಾ ಸಂಬಂಧ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಇಲಾಖೆಯಲ್ಲಿನ ಕಾರ್ಯದಲ್ಲಿನ ದೋಷಗಳಿಂದಾಗಿ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಕಳೆದ ನವೆಂಬರ್ ನಲ್ಲಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲೇನಿಯಾರ ಸ್ವಾಗತ ಕಾರ್ಯಕ್ರಮದ ಬಳಿಕ ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದ ಪಮೇಲಾ ಟೇಲರ್, ಮಿಶೆಲ್ ಒಬಾಮರನ್ನು "ಹೀಲ್ಸ್  ಧರಿಸಿರುವ ಕೋತಿ" ಎಂದು ಟೀಕಿಸಿದ್ದರು. ಈ ವಿಚಾರ ಅಮೆರಿಕದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಪಮೇಲಾ ಟೇಲರ್ ಅವರ ಹೇಳಿಕೆಗೆ ವ್ಯಾಪಕ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಅಮೆರಿಕ ಸರ್ಕಾರ ಕೂಡ  ಈ ಪ್ರಕರಣದಿಂದ ಸಾಕಷ್ಟು ಮುಜುಗರಕ್ಕೊಳಗಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com