ನೈಜೀರಿಯಾ: ಲಾಸ್ಸಾ ಸೋಂಕಿಗೆ 100ಕ್ಕೂ ಹೆಚ್ಚು ಜನ ಮೃತಪಟ್ಟಿರುವ ಘಟನೆ ನೈಜಿರಿಯಾದಲ್ಲಿ ವರದಿಯಾಗಿದೆ.
ನೈಜೀರಿಯಾ ಆರೋಗ್ಯ ಇಲಾಖೆ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಲಾಸ್ಸಾ ಸೋಂಕಿಗೆ ದೇಶದಲ್ಲಿ ಸುಮಾರು 100ಕ್ಕೂ ಹೆಚ್ಚು ಮೃತಪಟ್ಟಿರುವುದು ದೃಢಪಟ್ಟಿದೆ.
175 ಮಂದಿ ಲಾಸ್ಸಾ ಸೋಂಕಿಗೆ ಗುರಿಯಾಗಿದ್ದು, ಅದರಲ್ಲಿ 100 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೇರಲಿದೆ ಎಂದು ಆರೋಗ್ಯ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಅಬುಜಾ ಸೇರಿದಂತೆ ಪಶ್ಚಿಮ ಆಫ್ರಿಕಾದ 19 ರಾಜ್ಯಗಳಲ್ಲಿ ಲಾಸ್ಸಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಪ್ರತಿ ವರ್ಷ ಲಾಸ್ಸಾ ಸೋಂಕಿಗೆ ಪಶ್ಚಿಮ ಆಫ್ರಿಕಾದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಾರೆ. ಸುಮಾರು 1ಲಕ್ಷದಿಂದ 3 ಲಕ್ಷ ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿದೆ.