ವಾರಿಸ್ ಅಹ್ಲುವಾಲಿಯಾ (ಚಿತ್ರಕೃಪೆ: ಇನ್ಸ್ ಟಾಗ್ರಾಮ್)
ವಾರಿಸ್ ಅಹ್ಲುವಾಲಿಯಾ (ಚಿತ್ರಕೃಪೆ: ಇನ್ಸ್ ಟಾಗ್ರಾಮ್)

ವಿಮಾನ ಪ್ರವೇಶಕ್ಕೆ ಸಿಖ್ ವ್ಯಕ್ತಿಗೆ ನಿರ್ಬಂಧ, ಟರ್ಬನ್ ತೆಗೆಯುವಂತೆ ಸಿಬ್ಬಂದಿ ಸೂಚನೆ

ಟರ್ಬನ್ ತೆಗೆಯಲು ನಿರಾಕರಿಸಿದ ಸಿಖ್ ವ್ಯಕ್ತಿಯೊಬ್ಬರಿಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡದ ಘಟನೆ ಅಮೆರಿಕದಲ್ಲಿ ಮಂಗಳವಾರ ನಡೆದಿದೆ...
Published on

ನ್ಯೂಯಾರ್ಕ್: ಟರ್ಬನ್ ತೆಗೆಯಲು ನಿರಾಕರಿಸಿದ ಸಿಖ್ ವ್ಯಕ್ತಿಯೊಬ್ಬರಿಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡದ ಘಟನೆ ಅಮೆರಿಕದಲ್ಲಿ ಮಂಗಳವಾರ ನಡೆದಿದೆ.

ಮೂಲತಃ ನಟರಾಗಿರುವ ವಾರಿಸ್ ಅಹ್ಲುವಾಲಿಯಾ ಎಂಬ ಇಂಡೋ-ಅಮೆರಿಕನ್ ಸಿಖ್ ವ್ಯಕ್ತಿ ಮಿಕ್ಸಿಕೋಗೆ ಪ್ರಯಾಣ ಬೆಳೆಸಿದ್ದರು. ಏರೋ ಮೆಕ್ಸಿಕೋ ವಿಮಾನದಲ್ಲಿ ಪ್ರಯಾಣಿಸಲು  ಅಹ್ಲುವಾಲಿಯಾ ನಿಲ್ದಾಣಕ್ಕೆ ಆಗಮಿಸಿದಾಗ ಭದ್ರತಾ ಪರಿಶೀಲನೆ ವೇಳೆ ಅವರನ್ನು ತಡೆದ ಸಿಬ್ಬಂದಿ ಟರ್ಬನ್ ತೆಗೆಯುವಂತೆ ಸೂಚಿಸಿದ್ದಾರೆ. ಟರ್ಬನ್ ತಮ್ಮ ಧಾರ್ಮಿಕ ಪ್ರತೀಕವಾಗಿದ್ದು,  ಇದನ್ನು ತೆಗೆಯಲು ಸಾಧ್ಯವಿಲ್ಲ ಎಂದು ಅಹ್ಲುವಾಲಿಯಾ ಹೇಳಿದರಾದರೂ, ತಮ್ಮ ಮೊಂಡು ಹಠಕ್ಕೆ ಬಿದ್ದ ಸಿಬ್ಬಂದಿಗಳು ಟರ್ಬನ್ ತೆಗೆಯದ ಹೊರತು ವಿಮಾನ ಪ್ರಯಾಣಕ್ಕೆ ಅವಕಾಶ  ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬೇರೆ ದಾರಿ ಇಲ್ಲದೇ ಅಹ್ಲುವಾಲಿಯಾ ಅಲ್ಲಿಂದ ವಾಪಸಾಗಿದ್ದಾರೆ. ಬಳಿಕ ನಿಲ್ದಾಣದಲ್ಲಿ ತಮಗಾದ ಘಟನೆ ಕುರಿತು ಇನ್ಸ್ ಟಾಗ್ರಾಮ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ವಾರಿಸ್  ಅಹ್ಲುವಾಲಿಯಾ, ನನ್ನ ಟರ್ಬನ್ ಕಾರಣ ನೀಡಿ ಏರೋ ಮೆಕ್ಸಿಕೋ ಸಿಬ್ಬಂದಿಗಳು ವಿಮಾನ ಪ್ರಯಾಣವನ್ನು ತಡೆದಿದ್ದಾರೆ. ನನ್ನ ಧರ್ಮದ ಪ್ರಕಾರ ನಾನು ಹೊರಗಡೆ ಇದ್ದಾಗ ಟರ್ಬನ್  ಧರಿಸಬೇಕು ಎಂದು ಅವರಿಗೆ ಮನವರಿಕೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವರು ಕೇಳಲಿಲ್ಲ ಎಂದು ಅಹ್ಲುವಾಲಿಯಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾರಿಸ್ ಅಹ್ಲುವಾಲಿಯಾ ಘಟನೆ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ ಅಮೆರಿಕದಲ್ಲಿರುವ ಸಿಖ್ ಧರ್ಮೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಏರೋ ಮೆಕ್ಸಿಕೋ ವಿರುದ್ಧ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಏರೋ ಮೆಕ್ಸಿಕೋ ವಿಮಾನಯಾನ ಸಂಸ್ಥೆ ವಾರಿಸ್ ಅಹ್ಲುವಾಲಿಯಾ ಅವರಿಗೆ ಬದಲಿ ವ್ಯವಸ್ಥೆ  ಕಲ್ಪಿಸುವ ಭರವಸೆ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com