ದಕ್ಷಿಣ ಕೊರಿಯಾದಲ್ಲಿ ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆ ನಿಯೋಜನೆಗೆ ಚೀನಾ ವಿರೋಧ

ದಕ್ಷಿಣ ಕೊರಿಯಾದಲ್ಲಿ ಥರ್ಮಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್(ಥಾಡ್) ನ್ನು ನಿಯೋಜಿಸುವುದಕ್ಕೆ ಚೀನಾ ಸ್ಪಷ್ಟ ವಿರೋಧ ವ್ಯಕ್ತಪಡಿಸಿದೆ.
ಚೀನಾ
ಚೀನಾ

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಥರ್ಮಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್(ಥಾಡ್) ನ್ನು ನಿಯೋಜಿಸುವುದಕ್ಕೆ ಚೀನಾ ಸ್ಪಷ್ಟ ವಿರೋಧ ವ್ಯಕ್ತಪಡಿಸಿದೆ.
ದಕ್ಷಿಣ ಕೊರಿಯಾದೊಂದಿಗೆ ನಡೆದ 7 ನೇ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ವೇಳೆ ಚೀನಾದ ಉಪ ವಿದೇಶಾಂಗ ಸಚಿವ ಜಾಂಗ್ ಯೆಸ್ಯೂಯ್, ಅಮೇರಿಕಾದ ಸುಧಾರಿತ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿರುವ (ಥಾಡ್) ನ್ನು ದಕ್ಷಿಣ ಕೊರಿಯಾದಲ್ಲಿ ನಿಯೋಜಿಸುವುದಕ್ಕೆ ಚೀನಾ ವಿರೋಧವಿದೆ ಎಂದು ಹೇಳಿದ್ದಾರೆ .
"ಕೊರಿಯನ್ ದ್ವೀಪ ಸಂಕೀರ್ಣ ಮತ್ತು ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿದೆ, ಶಾಂತಿ, ಸ್ಥಿರತೆ ನೆಲೆಸುವಂತೆ ಮಾಡುವ ಉದ್ದೇಶದಿಂದ ಕೊರಿಯನ್ ದ್ವೀಪವನ್ನು ಅಣ್ವಸ್ತ್ರಮುಕ್ತ ಮಾಡುವುದಕ್ಕೆ ಚೀನಾ ಬದ್ಧವಾಗಿದ್ದು ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಸಿದ್ಧವಿದೆ ಎಂದು ಚೀನಾದ ಉಪವಿದೇಶಾಂಗ ಸಚಿವ ಜಾಂಗ್ ತಿಳಿಸಿದ್ದಾರೆ.
ಕೊರಿಯನ್ ದ್ವೀಪಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಕೈಗೊಳ್ಳಲಿರುವ ನಿರ್ಣಯವನ್ನು ಚೀನಾ ಬೆಂಬಲಿಸಲಿದೆ, ಆದರೆ ದಕ್ಷಿಣ ಕೊರಿಯಾದಲ್ಲಿ ಥರ್ಮಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ (ಥಾಡ್) ನಿಯೋಜಿಸುವುದಕ್ಕೆ ಕೊರಿಯಾದೊಂದಿಗೆ ಮಾತುಕತೆಗೆ ಮುಂದಾಗಿರುವ ಅಮೆರಿಕ, ಸಿಯೋಲ್ ನ ಉದ್ದೇಶದ  ಬಗ್ಗೆ ಆತಂಕ ಇದೆ ಎಂದು ಚೀನಾ ಹೇಳಿದೆ.
ದಕ್ಷಿಣ ಕೊರಿಯಾದಲ್ಲಿ ಥಾಡ್ ನಿಯೋಜನೆಯಿಂದ ಪ್ರಾದೇಶಿಕವಾಗಿ ಆತಂಕಕಾರಿ ವಾತಾವರಣ ನಿರ್ಮಾಣವಾಗಲಿದೆ ಎಂದು ಚೀನಾ ಎಚ್ಚರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com