ಮಾರ್ಚ್ ನಲ್ಲಿ ಕ್ಯೂಬಾಗೆ ಭೇಟಿ ನೀಡಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾರ್ಚ್ ನಲ್ಲಿ ಕ್ಯೂಬಾಗೆ ಭೇಟಿ ನೀಡಲಿದ್ದಾರೆ. 80 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿರುವ ಅಮೆರಿಕ ಅಧ್ಯಕ್ಷರು ಕ್ಯೂಬಾಗೆ ಭೇಟಿ ನೀಡುತ್ತಿದ್ದಾರೆ.
ಬರಾಕ್ ಒಬಾಮ
ಬರಾಕ್ ಒಬಾಮ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮಾರ್ಚ್ ನಲ್ಲಿ ಕ್ಯೂಬಾಗೆ ಭೇಟಿ ನೀಡಲಿದ್ದಾರೆ. 80 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಧಿಕಾರದಲ್ಲಿರುವ ಅಮೆರಿಕ ಅಧ್ಯಕ್ಷರು ಕ್ಯೂಬಾಗೆ ಭೇಟಿ ನೀಡುತ್ತಿದ್ದಾರೆ.
ಫೆ.19 ರಂದು ಶ್ವೇತ ಭವನ ಬರಾಕ್ ಒಬಾಮ ಅವರ ಕ್ಯೂಬಾ ಪ್ರವಾಸದ ಬಗ್ಗೆ ವೇಳಾಪಟ್ಟಿ ಬಿಡುಗಡೆ ಮಾಡಲಿದೆ ಎಂದು ಅಮೆರಿಕ ಅಧಿಕಾರಿಯೊಬ್ಬರು ಸಿಎನ್ಎನ್ ಗೆ ಮಾಹಿತಿ ನೀಡಿದ್ದಾರೆ. ಅಮೆರಿಕ ಅಧ್ಯಕ್ಷರ ಭೇಟಿ ಕೊಲಂಬಿಯಾದ ಸರ್ಕಾರ ಮತ್ತು ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ಒಪ್ಪಂದಕ್ಕೆ ಸಾಕ್ಷಿಯಾಗಲಿದೆ.
2014 ರಲ್ಲಿ ಅಮೆರಿಕ ಕ್ಯೂಬಾ ರಾಷ್ಟ್ರಗಳ ಸರ್ಕಾರಗಳು ಘೋಷಿಸಿದ್ದ ದ್ವಿಪಕ್ಷೀಯ ಸಂಬಂಧ ಬೆಳವಣಿಗೆಗೆ ಅಮರಿಕ ಅಧ್ಯಕ್ಷರ ಭೇಟಿ ಸಹಕಾರಿಯಾಗಲಿದೆ. 1928 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಕಾಲ್ವಿನ್ ಕೂಲಿಡ್ಜ್ ಕ್ಯೂಬಾಗೆ ಭೇಟಿ ನೀಡಿದ್ದ ಕೊನೆಯ ಅಮೆರಿಕ ಅಧ್ಯಕ್ಷರಾಗಿದ್ದರು. ಕ್ಯೂಬಾ- ಅಮೆರಿಕ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸುವುದರ ಭಾಗವಾಗಿ ಫೆ.16 ರಂದು ಉಭಯ ರಾಷ್ಟ್ರಗಳು ಪರಸ್ಪರ ನಾಗರಿಕ ವಿಮಾನಯಾನ ಸೌಲಭ್ಯವನ್ನು ಪ್ರಾರಂಭಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು. ಅಮರಿಕ- ಕ್ಯೂಬಾ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದ ಪರಿಣಾಮ 5 ಕ್ಕೂ ಹೆಚ್ಚು ದಶಕದ ನಂತರ ಎರಡು ರಾಷ್ಟ್ರಗಳ ನಡುವೆ ವಿಮಾನಯಾನ ಸೌಲಭ್ಯ ಪ್ರಾರಂಭವಾಗುತ್ತಿದೆ.
2015 ರ ಆಗಸ್ಟ್ ನಲ್ಲಿ ಕ್ಯೂಬಾದಲ್ಲಿ ಅಮೆರಿಕದ ರಾಯಭಾರಿ ಕಚೇರಿ ಪ್ರಾರಂಭವಾಗಿತ್ತು. ಅಂದಿನಿಂದ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳು ಕ್ಯೂಬಾಗೆ ಭೇಟಿ ನೀಡುತ್ತಿದ್ದಾರೆ, ಈಗ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಸರದಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com