

ಇಸ್ಲಾಮಾಬಾದ್: ಪಾಕಿಸ್ತಾನ ಅಮೆರಿಕ ದ್ವಿಪಕ್ಷೀಯ ಮಾತುಕತೆ ಫೆ.29 ರಂದು ನಡೆಯಲಿದೆ. ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಹಾಗೂ ಅಮೆರಿಕಾದ ಯುಎಸ್ ಕಾರ್ಯದರ್ಶಿ ಜಾನ್ ಕೆರ್ರಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಡೈಲಿ ಟೈಮ್ಸ್ ವರದಿ ಮಾಡಿದೆ.
ಪಾಕಿಸ್ತಾನದ ಆರ್ಥಿಕ ಬೆಳವಣಿಗೆ, ವ್ಯಾಪಾರ, ಪ್ರಾದೇಶಿಕ ಸ್ಥಿರತೆ, ಸಹಕಾರ ಮತ್ತು ಭಯೋತ್ಪಾದನಾ ನಿಗ್ರಹ ವಿಷಯ ದ್ವಿಪಕ್ಷೀಯ ಮಾತುಕತೆಯ ಕೇಂದ್ರಬಿಂದುವಾಗಿರಲಿದೆ.
2015 ರಲ್ಲಿ ಇಸ್ಲಾಮಾಬಾದ್ ನಲ್ಲಿ ಈ ಹಿಂದಿನ ದ್ವಿಪಕ್ಷೀಯ ಮಾತುಕತೆ ನಡೆದಿತ್ತು. 2010 ರಲ್ಲಿ ಪ್ರಾರಂಭವಾಗಿದ್ದ ದ್ವಿಪಕ್ಷೀಯ ಮಾತುಕತೆ ಪ್ರಕ್ರಿಯೆ ಪ್ರಾರಂಭವಾಗಿತ್ತು. 2011 ರಲ್ಲಿ ಅಮೆರಿಕ ಅಲ್ ಖೈದಾ ಉಗ್ರ ಬಿನ್ ಲ್ಯಾಡನ್ ನನ್ನು ಹತ್ಯೆ ಮಾಡಿದ್ದ ನಂತರ ಪಾಕ್- ಅಮೆರಿಕ ದ್ವಿಪಕ್ಷೀಯಮಾತುಕತೆಗೆ ಅಡ್ಡಿ ಉಂಟಾಗಿತ್ತು. ಮತ್ತೆ 2014 ರಲ್ಲಿ ದ್ವಿಪಕ್ಷೀಯ ಮಾತುಕತೆ ಪ್ರಕ್ರಿಯೆ ಪ್ರಾರಂಭವಾಗಿತ್ತು.