ನೇತಾಜಿ ಚೀನಾದಲ್ಲಿ ಕಾಣಿಸಿಕೊಂಡಿರಲಿಲ್ಲ

ನೇತಾಜಿ ಸುಭಾಶ್ಚಂದ್ರ ಬೋಸ್ ಸಾವಿನ ರಹಸ್ಯಕ್ಕೆ ಸಂಬಂಧಪಟ್ಟಂತೆ ಬ್ರಿಟನ್ ಮೂಲದ ವೆಬ್‍ಸೈಟ್ ಶನಿವಾರ ಮಹತ್ವದ...
ನೇತಾಜಿ ಸುಭಾಶ್ಚಂದ್ರ ಬೋಸ್
ನೇತಾಜಿ ಸುಭಾಶ್ಚಂದ್ರ ಬೋಸ್
ಲಂಡನ್: ನೇತಾಜಿ ಸುಭಾಶ್ಚಂದ್ರ ಬೋಸ್ ಸಾವಿನ ರಹಸ್ಯಕ್ಕೆ ಸಂಬಂಧಪಟ್ಟಂತೆ ಬ್ರಿಟನ್ ಮೂಲದ ವೆಬ್‍ಸೈಟ್ ಶನಿವಾರ ಮಹತ್ವದ ದಾಖಲೆ ಬಿಡುಗಡೆ ಮಾಡಿದೆ. 
ನೇತಾಜಿಯವರ ಸಾವಿನ ಹಾಗೂ ಆ ಬಳಿಕದ ಅವರ ಅಸ್ತಿತ್ವದ ಕುರಿತು ಇರುವ ಊಹಾಪೋಹಗಳಿಗೆ ತೆರೆ ಎಳೆವ ನಿಟ್ಟಿನಲ್ಲಿ ಸ್ಥಾಪನೆಯಾಗಿರುವ ಬೋಸ್ಫೆೈಲ್ಸ್ ಡಾಟ್ ಇನ್ಫೋ (www.bosefiles.info) ಹೆಸರಿನ ವೆಬ್‍ಸೈಟ್ ಈ ಮಹತ್ವದ ದಾಖಲೆ ಬಿಡುಗಡೆ ಮಾಡಿದ್ದು, ಘಟನೆಯಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎನ್ನಲಾದ ವಿಮಾನ ಅಪಘಾತದ ಬಳಿಕ ಅವರು ಚೀನಾದಲ್ಲಿ ಕಾಣಿಸಿಕೊಂಡಿದ್ದರು ಎಂಬ ಮಾಹಿತಿಯನ್ನು ಅಲ್ಲಗಳೆದಿದೆ. 
1945ರಲ್ಲಿ ತೈವಾನ್‍ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಬೋಸ್ ಅಸುನೀಗಿದ್ದರು ಎಂದು ವರದಿಯಾಗಿತ್ತು. ಆದರೆ, ನೇತಾಜಿಯವರ ಅನುಯಾಯಿಯಾಗಿದ್ದ ಎಸ್ ಎಂ ಗೋಸ್ವಾಮಿ ಎಂಬುವರು ನೇತಾಜಿ ಕಣ್ಮರೆ ತನಿಖಾ ಸಮಿತಿ ಎದುರು ಹಾಜರಾಗಿ, 1952ರಲ್ಲಿ ನೇತಾಜಿ ಚೀನಾದ ರಾಜಧಾನಿ ಬೀಜಿಂಗ್‍ನಲ್ಲಿ ಕಾಣಿಸಿಕೊಂಡಿದ್ದರು ಎಂದು ಅವರನ್ನು ಹೋಲುವ ವ್ಯಕ್ತಿಯನ್ನೊಳಗೊಂಡ ಭಾವಚಿತ್ರದ ಸಾಕ್ಷ್ಯ ನೀಡಿದ್ದರು. 
ಆ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಚೀನಾದ ತನ್ನ ದೂತವಾಸಕ್ಕೆ ಆ ಚಿತ್ರ ಕಳಿಸಿ ಮಾಹಿತಿ ಕೇಳಿತ್ತು. ದೂತವಾಸದ ಕೋರಿಕೆ ಮೇರೆಗೆ ತನಿಖೆ ನಡೆಸಿದ್ದ ಚೀನಾ ವಿದೇಶಾಂಗ ಸಚಿವಾಲಯ, ಅಂತಿಮವಾಗಿ ಅದು ಸ್ಥಳೀಯ ಲೀ ಕಿ ಹಂಗ್ ಎಂಬ ವೈದ್ಯಕೀಯ ಮೇಲ್ವಿಚಾರಕ, ಆ ಚಿತ್ರಕ್ಕೂ ನೇತಾಜಿಯವರಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿ ಟೆಲಿಗ್ರಾಂ ಮಾಡಿತ್ತು ಎಂಬ ದಾಖಲೆ ಬಿಡುಗಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com