ಬಸ್ ಗೆ ಬೆಂಕಿ; 14 ಸಾವು, 32 ಮಂದಿಗೆ ಗಾಯ

ಉತ್ತರ ಚೀನಾದಲ್ಲಿ ಭೀಕರ ದುರ್ಘಟನೆ ಸಂಭವಿಸಿದ್ದು, ಬಸ್ ಗೆ ಬೆಂಕಿ ತಗುಲಿ 14 ಮಂದಿ ಪ್ರಯಾಣಿಕರು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ...
ಚೀನಾದಲ್ಲಿ ಬಸ್ ಗೆ ಬೆಂಕಿ (ಸಂಗ್ರಹ ಚಿತ್ರ)
ಚೀನಾದಲ್ಲಿ ಬಸ್ ಗೆ ಬೆಂಕಿ (ಸಂಗ್ರಹ ಚಿತ್ರ)

ಬೀಜಿಂಗ್: ಉತ್ತರ ಚೀನಾದಲ್ಲಿ ಭೀಕರ ದುರ್ಘಟನೆ ಸಂಭವಿಸಿದ್ದು, ಬಸ್ ಗೆ ಬೆಂಕಿ ತಗುಲಿ 14 ಮಂದಿ ಪ್ರಯಾಣಿಕರು ಧಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.

ಉತ್ತರ ಚೀನಾದ ನಿಂಗ್ ಕ್ಸಿಯಾ ಪ್ರಾಂತ್ಯದ ರಾಜಧಾನಿ ಯಿಂಚುವಾನ್ ನಲ್ಲಿ ಇಂದು ಬೆಳಗ್ಗೆ ಸುಮಾರು 7.30ರ ಸುಮಾರಿನಲ್ಲಿ ಈ ಭೀಕರ ಘಟನೆ ನಡೆದಿದ್ದು, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ  ಸುಮಾರು 50 ಮಂದಿಯ ಪೈಕಿ 14 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 32 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತುತ ಎಲ್ಲ ಗಾಯಾಳುಗಳನ್ನು  ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್ ಗೆ ಬೆಂಕಿ ತಗುಲುತ್ತಿದ್ದಂತೆಯೇ ವಿಚಾರ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಸ್ಥಳಕ್ಕಾಗಮಿಸಿದ ಹತ್ತೇ ನಿಮಿಷದಲ್ಲಿ ಬಸ್ ಗೆ  ಹತ್ತಿದ್ದ ಬೆಂಕಿ ನಂದಿಸಿದರಾದರೂ, ಅಷ್ಟರೊಳಗಾಗಿಯೇ ದುರಂತ ನಡೆದು ಹೋಗಿತ್ತು, ಬಸ್ ನಲ್ಲಿದ್ದ ಸುಮಾರು 14 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು. ಇನ್ನು ಈ ಬಸ್ ಬೆಂಕಿ ದುರಂತದ  ಹಿಂದೆ ವ್ಯಕ್ತಿಯೋರ್ವನ ಕೈವಾಡದ ಶಂಕೆ ವ್ಯಕ್ತವಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚೀನಾ ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿರುವ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ.

ಸಿಸಿಡಿವಿ ದೃಶ್ಯಾವಳಿಗಳ ಆಧಾರದ ಮೇಲೆ ವ್ಯಕ್ತಿ ಬಸ್ ಗೆ ಬೇಕೆಂದೆ ಬೆಂಕಿ ಹಚ್ಚಿರುವ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆ. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ಶಂಕಿತ ವ್ಯಕ್ತಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com