ಅಮೆರಿಕದ ಪವರ್ ಬಾಲ್ ಲಾಟರಿ (ಸಂಗ್ರಹ ಚಿತ್ರ)
ಅಮೆರಿಕದ ಪವರ್ ಬಾಲ್ ಲಾಟರಿ (ಸಂಗ್ರಹ ಚಿತ್ರ)

ಯಾರಿಗೆ ಒಲಿಯುತ್ತೆ ರು.8,700 ಕೋಟಿಯ ಜಾಕ್‍ಪಾಟ್?

ರಾತ್ರಿ ಬೆಳಗಾಗುವುದರೊಳಗೆ ವ್ಯಕ್ತಿಯನ್ನು ಕೋಟ್ಯಧಿಪತಿಯನ್ನಾಗಿಸುವ ಅಮೆರಿಕದ ಪವರ್ ಬಾಲ್ ಲಾಟರಿಯ ಶನಿವಾರ ಡ್ರಾದಲ್ಲಿ ಯಾರೂ ಗೆಲ್ಲಲೇ ಇಲ್ಲ...
Published on

ನ್ಯೂಯಾರ್ಕ್: ರಾತ್ರಿ ಬೆಳಗಾಗುವುದರೊಳಗೆ ವ್ಯಕ್ತಿಯನ್ನು ಕೋಟ್ಯಧಿಪತಿಯನ್ನಾಗಿಸುವ ಅಮೆರಿಕದ ಪವರ್ ಬಾಲ್ ಲಾಟರಿಯ ಶನಿವಾರ ಡ್ರಾದಲ್ಲಿ ಯಾರೂ ಗೆಲ್ಲಲೇ ಇಲ್ಲ.

ಹೀಗಾಗಿ ಇದೇ ಮೊದಲ ಬಾರಿಗೆ 900 ದಶಲಕ್ಷ ಡಾಲರ್(ರು.6 ಸಾವಿರ ಕೋಟಿ) ಜಾಕ್‍ಪಾಟ್ ಮೊತ್ತವನ್ನು 1.3 ಶತಕೋಟಿ ಡಾಲರ್(ರು.8,700 ಕೋಟಿ)ಗೆ ಏರಿಸಲಾಗಿದ್ದು, ಹೊಸ ದಾಖಲೆ ರ್ಮಿಸಲಾಗಿದೆ. ಬುಧವಾರ ಮುಂದಿನ ಡ್ರಾ ನಡೆಯಲಿದೆ. ಹೀಗಾಗಿ, ಬದುಕನ್ನೇ ಬದಲಾಯಿಸುವ ಸಂಪತ್ತಿನ ಸುನಾಮಿಗಾಗಿ ಸಾವಿರಾರು ಅಮೆರಿಕನ್ನರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು  ಕಾಯುತ್ತಿದ್ದಾರೆ.

ಶನಿವಾರ ಟಿಕೆಟ್ ಹೊಂದಿದ್ದ ಯಾವೊಬ್ಬನೂ ಮಾ್ಯಜಿಕ್ ಸಂಖ್ಯೆಯನ್ನು ಜೋಡಿಸುವಲ್ಲಿ ಯಶ ಕಾಣಲಿಲ್ಲ. ಕಳೆದ ನವೆಂಬರ್ 4ರಂದು 40 ದಶಲಕ್ಷ ಡಾಲರ್ (ರು.267 ಕೋಟಿ) ಮೊತ್ತದಲ್ಲಿ  ಆರಂಭವಾದ ಜಾಕ್‍ಪಾಟ್ 19 ಬಾರಿ ಮೊತ್ತ ಹೆಚ್ಚಿಸಿಕೊಂಡು ಈಗ 1.3 ಶತಕೋಟಿ ಡಾಲರ್ ತಲುಪಿದೆ. ಟಿಕೆಟ್ ಖರೀದಿಗಾಗಿ ಅಮೆರಿಕನ್ನರು ರಾತ್ರಿ ಹಗಲೆನ್ನದೆ ಸರತಿ ಸಾಲಲ್ಲಿ ನಿಂತಿದ್ದಾರೆ. ಯಾರಿಗೆ ಅದೃಷ್ಟ ಒಲಿಯಲಿದೆಯೋ, ಕಾದು ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com