ಪೋರ್ನ್ ವೀಕ್ಷಣೆಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಅಶ್ಲೀಲ ವಿಡಿಯೋಗಳ ವೀಕ್ಷಣೆ ಯಲ್ಲಿ ವಿಶ್ವದಲ್ಲೇ ಭಾರತ 3ನೇ ಸ್ಥಾನಕ್ಕೇರಿದೆ. ಈ ವಿಚಾರದಲ್ಲಿ ಭಾರತವು ಆಸ್ಟ್ರೇಲಿಯಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅಶ್ಲೀಲ ವಿಡಿಯೋಗಳ ವೀಕ್ಷಣೆ ಯಲ್ಲಿ ವಿಶ್ವದಲ್ಲೇ ಭಾರತ 3ನೇ ಸ್ಥಾನಕ್ಕೇರಿದೆ. ಈ ವಿಚಾರದಲ್ಲಿ ಭಾರತವು ಆಸ್ಟ್ರೇಲಿಯಾ, ಕೆನಡಾವನ್ನು ಹಿಂದಿಕ್ಕಿ ಮುಂದೆಸಾಗಿದೆ. 
ಫೋರ್ನ್‍ಹಬ್.ಕಾಂ ಬಿಡುಗಡೆ ಮಾಡಿದ 2015ರ ವಾರ್ಷಿಕ ಬಳಕೆದಾರರ ಮಾಹಿತಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಅದರಂತೆ, ಫೋರ್ನ್ ವೀಕ್ಷಣೆಯಲ್ಲಿ ಅಮೆರಿಕ, ಬ್ರಿಟನ್ ನಂತರದ ಸ್ಥಾನದಲ್ಲಿ ಭಾರತ ಕಾಣಿಸಿಕೊಂಡಿದೆ. ಅಚ್ಚರಿಯೆಂದರೆ, 2015ರಲ್ಲೇ ಕೇಂದ್ರ ಸರ್ಕಾರವು ಫೋರ್ನ್‍ಗೆ ನಿಷೇಧ ಹೇರಿ ವಿವಾದಕ್ಕೆ ಕಾರಣವಾಗಿತ್ತು. ಬಳಿಕ, ನಿಷೇಧವನ್ನು ವಾಪಸ್ ಪಡೆದಿತ್ತು. ಅಷ್ಟೇ ಅಲ್ಲ, ಕರ್ನಾಟಕ, ಗುಜರಾತ್, ಒಡಿಶಾ ಹಾಗೂ ಅಸ್ಸಾಂ ಅಸೆಂಬ್ಲಿಗಳಲ್ಲೇ ಜನಪ್ರತಿನಿಧಿಗಳು ನೀಲಿಚಿತ್ರ ವೀಕ್ಷಿಸಿ ವಿವಾದಕ್ಕೀಡಾಗಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು.
ಸೆಕೆಂಡಿಗೆ 75 ಜಿಬಿ: ತಮ್ಮ ವೆಬ್ ತಾಣದಲ್ಲಿ ಯಾವ ಯಾವ ದೇಶದ ಜನ, ಏನನ್ನು ಹೆಚ್ಚು ವೀಕ್ಷಣೆ ಮಾಡುತ್ತಾರೆ, ಅವರ ಹೆಚ್ಚು ವೀಕ್ಷಣೆಯ ವಿಡಿಯೋಗಳಾವು ಎಂಬ ಮಾಹಿತಿಯನ್ನು ವಾಡಿಕೆಯಂತೆ ವೆಬ್‍ತಾಣ ಬಿಡುಗಡೆ ಮಾಡಿದೆ. ಅದರಂತೆ ಅಶ್ಲೀಲ ವಿಡಿಯೋಗಳ ಒಟ್ಟು ವೀಕ್ಷಣೆಯ ಪ್ರಮಾಣ ಸೆಕೆಂಡಿಗೆ 75 ಜಿಬಿ ಎಂದಿದೆ ಫೋರ್ನ್‍ಹಬ್ ವೆಬ್ ಸೈಟ್. ಇದೇ ವೇಳೆ, ಕೆನಡಾ ಮೂಲದ ಸನ್ನಿ ಲಿಯೋನ್ ಈ ಬಾರಿಯೂ ಗೂಗಲ್ ಸರ್ಚ್ ರಿಸಲ್ಟ್‍ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಫೋನ್ರ್ ಹಬ್ ತಿಳಿಸಿರುವುದಾಗಿ ಸಿಎನ್ ಎನ್ ಐಬಿಎನ್ ವರದಿ ಮಾಡಿದೆ.
ಇಂಡಿಯನ್ ಪದವೇ ಹೆಚ್ಚು: ವಿಶೇಷವೆಂದರೆ, ಭಾರತೀಯರು ಆನ್‍ಲೈನ್‍ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುವಾಗ `ಇಂಡಿಯನ್' ಎಂಬ ಪದದಿಂದಲೇ ಆರಂಭಿಸುತ್ತಾ ರೆ ಎಂದೂ ಫೋರ್ನ್‍ಹಬ್ ವರದಿ ಹೇಳಿದೆ. ಅಂದರೆ, `ಇಂಡಿಯನ್ ಭಾಭಿ', `ಇಂಡಿಯನ್ ವೈಫ್', `ಇಂಡಿಯನ್ ಆ್ಯಕ್ಟ್ರೆಸ್', `ಇಂಡಿಯನ್ ಆಂಟಿ' ಮುಂತಾದ ಪದಗಳನ್ನೇ ಬಳಸಿ ಭಾರತೀಯರು `ಶೋಧ' ಕಾರ್ಯ ನಡೆಸುತ್ತಾರೆ. ಫೋರ್ನ್‍ಹಬ್ ಟಾಪ್ 5 ದೇಶಗಳು ಅಮೆರಿಕ, ಬ್ರಿಟನ್, ಭಾರತ, ಕೆನಡಾ, ಜರ್ಮನಿ ಅತಿ ಹೆಚ್ಚು ಸರ್ಚ್‍ಗೊಳಗಾದವರು ಕಿಮï ಕರ್ಡಾಶಿಯನ್, ಮಿಯಾ ಖಲೀಫಾ, ಲಿಸಾ ಆ್ಯನ್, ಸನ್ನಿ ಲಿಯೋನ್, ಮ್ಯಾಡಿಸನ್ ಐವಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com