ಭಾರತ-ಪಾಕ್ ನಡುವೆ ಶಾಂತಿ ಮಾತುಕತೆ ಮುಂದೂಡಿಕೆ

ನಾಳೆ ನಡೆಯಬೇಕಿದ್ದ ಭಾರತ- ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ...
ಭಾರತ-ಪಾಕಿಸ್ತಾನ ಧ್ವಜ
ಭಾರತ-ಪಾಕಿಸ್ತಾನ ಧ್ವಜ

ಇಸ್ಲಾಮಾಬಾದ್: ನಾಳೆ ನಡೆಯಬೇಕಿದ್ದ ಭಾರತ- ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆ ಮುಂದೂಡಲಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಕಚೇರಿ ತಿಳಿಸಿದೆ.

ಜನವರಿ 15ರಂದು ಭಾರತ- ಶಾಂತಿ ಮಾತುಕತೆಯನ್ನು ನಿಗದಿಗೊಳಿಸಿತ್ತು. ಆದರೆ ನಾಳಿನ ಮಾತುಕತೆ ರದ್ದಾಗಿತ್ತು. ಬೇರೊಂದು ದಿನ ನಡೆಸಲು ಸಿದ್ಧತೆ ನಡೆಸಲಾಗಿದ್ದು. ದಿನಾಂಕ ಇನ್ನೂ ನಿಗದಿಪಡಿಸಿಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಖಾಜಿ ಖಲೀಲುಲ್ಲಾ ತಿಳಿಸಿದ್ದಾರೆ.

ಇನ್ನೂ ಪಠಾಣ್ ಕೋಟ್ ದಾಳಿ ಸಂಬಂಧ ಇಸ್ಲಾಮಾಬಾದ್ ನಲ್ಲಿ  ಜೈಶ್- ಇ- ಮೊಹಮದ್ ಸಂಘಟನೆಯ  ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಉಗ್ರನನ್ನು ಬಂಧಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.

ಉಗ್ರವಾದ ಎಲ್ಲಾ ದೇಶಗಳ ಶತ್ರವಾಗಿದೆ ಎಂದು ಹೇಳಿದ್ದಾರೆ. ಆದರೆ ಎರಡು ದಿನಗಳ ಹಿಂದೆ ಜೈಶ್- ಇ -ಮೊಹಮದ್ ಸಂಘಟನೆಯ ಮುಖ್ಯಸ್ಥನನ್ನು ಬಂಧಿಸಿ ರಹಸ್ಯ ಸ್ಥಳದಲ್ಲಿ ಇಡಲಾಗಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com