ಝಿಕಾ ಗಾಯದ ಮೇಲೆ ಉಪ್ಪು ಸವರಿದ ನೀರಿನ ಸಮಸ್ಯೆ

ಝಿಕಾ ವೈರಸ್ ನ ದಾಳಿಗೆ ತುತ್ತಾಗಿರುವ ವೆನಿಜ್ಯುವೆಲಾದಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿರುವುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಝಿಕಾ ವೈರಸ್ ನ ದಾಳಿಗೆ ತುತ್ತಾಗಿರುವ ವೆನಿಜ್ಯುವೆಲಾದಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿರುವುದು, ಅಲ್ಲಿನ ನಾಗರಿಕರಿಗೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ.

ನೀರಿನ ತೀರ್ವ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಜನ ಎಲ್ಲೆಲ್ಲಿಂದಲೋ ನೀರನ್ನು ತಂದು ಸಂಗ್ರಹಿಸಿಡುತ್ತಿದ್ದಾರೆ. ಆದರೆ, ಸಂಗ್ರಹಿಸಿಟ್ಟ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿಯಾಗಬಹುದು, ಜಿಕಾ ಪ್ರಹಾರ ಹೆಚ್ಚಾಗಬಹುದು ಎನ್ನುವುದು ಆರೋಗ್ಯ ಇಲಾಖೆಯ ಆತಂಕ. ಹೀಗಾಗಿ, ನೀರು ಸಂಗ್ರಹಿಸಿಡಬೇಡಿ ಎಂದು ಸಲಹೆ ನೀಡುತ್ತಿದ್ದಾರೆ. ಇದರಿಂದಾಗಿ ಜನ ತೀವ್ರ ಗೊಂದಲಕ್ಕೆ ಸಿಲುಕಿದ್ದಾರೆ.

ಯುದ್ಧ ಗೆದ್ದೇ ಗೆಲ್ಲುತ್ತೇವೆ: ಝಿಕಾ ವಿರುದ್ಧದ ಯುದ್ಧವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಬ್ರೆಜಿಲ್ ಅಧ್ಯಕ್ಷೆ ದಿಲ್ಮಾ ರೂಸೆಫ್ ಶನಿವಾರ ತಿಳಿಸಿದ್ದಾರೆ. ಆದರೆ, ಸರ್ಕಾರದ ಪ್ರತಿಕ್ರಿಯೆಯನ್ನು ಟೀಕಿಸಿರುವ ತಜ್ಞರು, ಒಲಿಂಪಿಕ್ಸ್ ಝಿಕಾ ವೈರಸ್ ಅನ್ನು ಇನ್ನಷ್ಟು ಹರಡುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com