ಸಾಂದರ್ಭಿಕ ಚಿತ್ರ
ವಿದೇಶ
ಮಯನ್ಮಾರ್ ನಲ್ಲಿ ಮುಸ್ಲಿಮರ ಪ್ರಾಥನಾ ಮಂದಿರಕ್ಕೆ ಬೆಂಕಿ ಇಟ್ಟ ಬೌದ್ಧ ಧರ್ಮೀಯ ಗುಂಪು
ಮಯನ್ಮಾರ್ ನಲ್ಲಿ ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ ಬೌದ್ಧ ಧರ್ಮೀಯರ ಗುಂಪು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ನಡೆದಿದೆ ಎಂದು ಶನಿವಾರ ಮಾಧ್ಯಮವೊಂದು ವರದಿ
ನಾಯ್ ಪಿಐ ತಾವ್: ಮಯನ್ಮಾರ್ ನಲ್ಲಿ ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ ಬೌದ್ಧ ಧರ್ಮೀಯರ ಗುಂಪು ಬೆಂಕಿ ಹಚ್ಚಿದ ಘಟನೆ ಶುಕ್ರವಾರ ನಡೆದಿದೆ ಎಂದು ಶನಿವಾರ ಮಾಧ್ಯಮವೊಂದು ವರದಿ ಮಾಡಿದೆ.
ರಾಜಧಾನಿ ನಾಯ್ ಪಿಐ ತಾವ್ ನಿಂದ 652 ಕಿಲೋ ಮೀಟರ್ ದೂರದಲ್ಲಿರುವ ಪಾಂಕತ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಮುಸ್ಲಿಂ ಧರ್ಮ ಮಂದಿರವನ್ನು ಕಾನೂನುಬಾಹಿರವಾಗಿ ಕಟ್ಟಲಾಗಿದೆ ಎಂದು ದೂಷಿಸಿ ಅದನ್ನು ನೆಲಸಮ ಮಾಡುವಂತೆ ಬೌದ್ಧ ರಾಷ್ಟ್ರೀಯರು ಆಗ್ರಹಿಸಿದ್ದಾರೆ.
ಅಗ್ನಿಶ್ಯಾಮಕ ದಳ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು, ಜನರ ಗುಂಪು ಅವರಿಗೆ ಅಡ್ಡಿಪಡಿಸಿದೆ ಎಂದು ತಿಳಿದುಬಂದಿದೆ.
2012 ರಿಂದಲೂ ಕೋಮುಘರ್ಷಣೆ ಮಯನ್ಮಾರ್ ನಲ್ಲಿ ಜಾರಿಯಿದ್ದು, ಮುಸ್ಲಿಮರು ಮತ್ತು ಬೌದ್ಧ ಧರ್ಮೀಯರ ನಡುವೆ ಘರ್ಷಣೆಗಳು ಹೆಚ್ಚಳಗೊಂಡಿವೆ. ಅಂದಿನಿಂದ ಸುಮಾರು 12 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ