

ಬೀಜಿಂಗ್: ಸಾಮಾಜಿಕ ತಾಣಗಳ ಮೂಲಕ ಎಲ್ಲರ ಗಮನ ಸೆಳೆಯುವ ಹುಚ್ಚು ವರ್ತನೆಗೆ ಹೊಸ ಸೇರ್ಪಡೆ.
ಚೀನಾದ ಬೀಜಿಂಗ್ ನಲ್ಲಿ ನಡೆದದ್ದು ಎನ್ನಲಾಗಿರುವ ವೈರಲ್ ವಿಡಿಯೋದಲ್ಲಿ, ಯುವಕನೊಬ್ಬ ಶವರ್ ನಲ್ಲಿ ಫ್ಲವರ್ ಪಾಟ್ ಇಟ್ಟು ಅದಕ್ಕೆ ಬೆಂಕಿ ಹೊತ್ತಿಸಿ ಅನಂತರ ಅದರ ಬೆಂಕಿ ಕಿಡಿಗಳಿಗೆ ತಲೆಯೊಡ್ಡಿ ತನ್ನ ಹುಚ್ಚಾಟ ಮೆರೆದಿದ್ದಾನೆ.
ಸ್ನಾನ ಮಾಡಲು ತಲೆಗೆ ಶಾಂಪು ಹಚ್ಚಿಕೊಳ್ಳುತ್ತಾನೆ ನಂತರ ಶವರ್ ಆನ್ ಮಾಡಿ ಅದಕ್ಕೆ ಬೆಂಕಿ ಹಚ್ಚುತ್ತಾನೆ. ಕೂಡಲೇ ಶವರ್ ನಿಂದ ಬೆಂಕಿಯ ಕಿಡಿಗಳು ಬರುತ್ತದೆ. ಕೆಲ ಸೆಕೆಂಡ್ ಬೆಂಕಿಯಲ್ಲಿ ಯುವಕ ತಲೆ ಸ್ನಾನ ಮಾಡುತ್ತಾನೆ. ಬೆಂಕಿಯ ಶಾಕ ತಾಗುತ್ತಿದ್ದಂತೆ ಶವರ್ ಬಂದ್ ಮಾಡುತ್ತಾನೆ.