ಇ-ಮೇಲ್ ವಿವಾದ; ಹಿಲರಿ ಕಾನೂನು ಉಲ್ಲಂಘಿಸಿಲ್ಲ ಎಂದ ಎಫ್ ಬಿಐ

ಸರ್ಕಾರಿ ಕೆಲಸಕ್ಕಾಗಿ ವೈಯುಕ್ತಿಕ ಇ-ಮೇಲ್ ಬಳಕೆ ಮಾಡುವ ಮೂಲಕ ವಿವಾದಕ್ಕೀಡಾಗಿದ್ದ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಎಫ್ ಬಿಐ ಹೇಳಿದೆ.
ಹಿಲರಿ ಕ್ಲಿಂಟನ್ (ಸಂಗ್ರಹ ಚಿತ್ರ)
ಹಿಲರಿ ಕ್ಲಿಂಟನ್ (ಸಂಗ್ರಹ ಚಿತ್ರ)

ವಾಷಿಂಗ್ಟನ್‌: ಸರ್ಕಾರಿ ಕೆಲಸಕ್ಕಾಗಿ ವೈಯುಕ್ತಿಕ ಇ-ಮೇಲ್ ಬಳಕೆ ಮಾಡುವ ಮೂಲಕ ವಿವಾದಕ್ಕೀಡಾಗಿದ್ದ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಯಾವುದೇ ರೀತಿಯ  ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಎಫ್ ಬಿಐ ಹೇಳಿದೆ.

ಸರ್ಕಾರಿ ಕೆಲಸಕ್ಕೆ ವೈಯುಕ್ತಿಕ ಇಮೇಲ್ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಎಫ್ ಬಿಐ, ಹಿಲರಿ ಕ್ಲಿಂಟನ್ ಯಾವುದೇ ರೀತಿಯ ಕಾನೂನು ಉಲ್ಲಂಘನೆ  ಮಾಡಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ಆದರೆ ಹಿಲರಿ ಅವರ ಕಚೇರಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಎಫ್ ಬಿಐ ಅಧಿಕಾರಿಗಳು, ಹಿಲರಿ ಕಚೇರಿ ಅಧಿಕಾರಿಗಳು ನಿಜಕ್ಕೂ  "ತುಂಬಾ ನಿರ್ಲಕ್ಷ್ಯ"ದವರಾಗಿದ್ದಾರೆ ಎಂದು ಎಫ್ ಬಿಐ ನಿರ್ದೇಶಕ ಜೇಮ್ಸ್ ಕೊಮಿ ಟೀಕಿಸಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್ ಗೆ ಈ ಇ-ಮೇಲ್ ವಿವಾದ ತೀವ್ರ ಹಿನ್ನಡೆಯನ್ನುಂಟು ಮಾಡಿದ್ದು, ಹಿಲರಿ ಅಮೆರಿಕ ವಿದೇಶಾಂಗ  ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಕೆಲಸಕ್ಕಾಗಿ ವೈಯಕ್ತಿಕ ಇ-ಮೇಲ್ ಬಳಕೆ ಮಾಡಿದ್ದರು. ಇದರಿಂದ ಸರ್ಕಾರಿ ಕಡತಗಳು ಹ್ಯಾಕರ್ಸ್ ಗಳ ಪಾಲಾಗುವ ಅಪಾಯವಿತ್ತು ಎಂದು  ಖ್ಯಾತ ಆಂಗ್ಲ ಸುದ್ದಿ ಸಂಸ್ಥೆ ವರದಿ ಮಾಡಿತ್ತು.

ಈ ಸಂಬಂಧ ಸ್ಪಷ್ಟನೆ ನೀಡಿದ್ದ ಹಿಲರಿ ಅವರ ಕಚೇರಿ ಅಧಿಕಾರಿಗಳು, ವೈಯಕ್ತಿಕ ಖಾತೆಯಿಂದ ಕಚೇರಿ ಕೆಲಸಕ್ಕಾಗಿ ಮಾಡಿದ ಇಮೇಲ್‌ಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಇರಿಸಿಕೊಳ್ಳಲಾಗಿದೆ  ಎಂದು ಹೇಳಿದ್ದಾರೆ. ಅಲ್ಲದೆ ಇಲಾಖಾಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ತಮಗಿಂತಲೂ ಹಿಂದಿನ ಕಾರ್ಯದರ್ಶಿಗಳಂತೆ ಹಿಲರಿ ಅವರೂ ವೈಯಕ್ತಿಕ ಇಮೇಲ್‌ ಖಾತೆಯನ್ನು  ಬಳಸುತ್ತಿದ್ದರು. ಸೂಕ್ತ ದಾಖಲೆಗಳನ್ನು ನಿರ್ವಹಣೆ ಮಾಡುವ ಮೂಲಕ ಸರ್ಕಾರಿ ಕೆಲಸಕ್ಕೆ ವೈಯಕ್ತಿಕ ಇಮೇಲ್‌ ಬಳಕೆ ಮಾಡಲು ವಿದೇಶಾಂಗ ಸಚಿವಾಲಯದ ಅಧಿಕಾರಿಗಳಿಗೆ ಅವಕಾಶವಿದೆ’  ಎಂದು ಕ್ಲಿಂಟನ್‌ ಅವರ ವಕ್ತಾರರಾದ ನಿಕ್‌ ಮೆರ್ರಿಲ್‌ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com