ದಕ್ಷಿಣ ಕೊರಿಯಾದಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಪ್ರತಿಯಾಗಿ ಉ. ಕೊರಿಯಾ ಕ್ಷಿಪಣಿ ಪರೀಕ್ಷೆ?

ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ...
ಖಂಡಾಂತರ ಕ್ಷಿಪಣಿ
ಖಂಡಾಂತರ ಕ್ಷಿಪಣಿ

ದಕ್ಷಿಣ ಕೊರಿಯಾದಲ್ಲಿ ಅಮೆರಿಕ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಥರ್ಮಲ್ ಹೈ ಅಲ್ಪಿಟ್ಯೂಡ್ ಏರಿಯಾ ಡಿಫೆನ್ಸ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು(ಟಿಎಚ್ಎಎಡಿ) ಅಳವಡಿಸಲು ಎರಡು ದೇಶಗಳು ಪ್ರಕಟಿಸಿದ್ದವು. ಇಂತಹ ಬೆಳವಣಿಗೆ ನಂತರವೇ ಕೆಲ ದಿನಗಳಲ್ಲೆ ಉತ್ತರ ಕೊರಿಯಾ ಜಲಾಂತರ್ಗಾಮಿ ನೌಕೆಯ ಮೂಲಕ ಉಡಾಯಿಸಬಹುದಾದ ಖಂಡಾಂತರ ಕ್ಷಿಪಣಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಪರೀಕ್ಷೆ ನಡೆಸಿರುವುದು ದಕ್ಷಿಣ ಕೊರಿಯಾಗೆ ಉತ್ತರ ಕೊರಿಯಾ ನೇರವಾಗಿ ನೀಡಿರುವ ಸವಾಲು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಅಮೆರಿಕ, ದಕ್ಷಿಣ ಕೊರಿಯಾದ ಈ ಉದ್ದೇಶಿತ ಯೋಜನೆ ಕುರಿತು ಚೀನಾ ಮತ್ತು ರಷ್ಯಾ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ದಕ್ಷಿಣ ಕೊರಿಯಾದಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆ ಮೂಲಕ ಆ ಭಾಗದ ಪ್ರದೇಶವನ್ನು ಅಸ್ಥಿರಗೊಳಿಸುವ ಹಾಗೂ ಅಣ್ವಸ್ತ್ರನಾಶ ಕಾರ್ಯಕ್ರಮಗಳಲ್ಲಿ ಹಿನ್ನೆಡೆ ಉಂಟು ಮಾಡುವ ಕ್ರಮ ಎಂದು ಚೀನಾ ಆರೋಪಿಸಿದೆ.

ಮಾತುಕತೆ ಮೂಲಕ ಉತ್ತರ ಹಾಗೂ ದಕ್ಷಿಣ ಕೊರಿಯಾ ನಡುವಿನ ಉದ್ವಿಗ್ನತೆಯನ್ನು ಪರಿಹರಿಸುವ ಯತ್ನಗಳಿಗೆ ಇದರಿಂದ ಅಡ್ಡಿಯಾಗಲಿದೆ ಎಂದು ಚೀನಾ ಹೇಳಿದೆ. ಇನ್ನು ರಷ್ಯಾ ಸಹ ಅಮೆರಿಕಾಗೆ ಎಚ್ಚರಿಕೆ ನೀಡಿದ್ದು ದಕ್ಷಿಣ ಕೊರಿಯಾದಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಿದರೆ ಸರಿಪಡಿಸಲಾಗದಷ್ಟು ದುಷ್ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com